ADVERTISEMENT

ಜಾನಪದ ಕಲಾವಿದ ಖೇಮು ತುಳುಸು ಗೌಡ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2019, 14:09 IST
Last Updated 14 ಸೆಪ್ಟೆಂಬರ್ 2019, 14:09 IST
ಖೇಮು ತುಳುಸು ಗೌಡ
ಖೇಮು ತುಳುಸು ಗೌಡ   

ಅಂಕೋಲಾ(ಉತ್ತರ ಕನ್ನಡ): ಜಾನ‍‍ಪದ ಕಲಾವಿದ, ನಾಟಿ ವೈದ್ಯ ಖೇಮು ತುಳುಸು ಗೌಡ (73), ತಾಲ್ಲೂಕಿನಬೇಲೆಕೇರಿಯ ಸೀಬರ್ಡ್ ಕಾಲೊನಿಯಲ್ಲಿರುವ ಸ್ವಗೃಹದಲ್ಲಿ ಶನಿವಾರ ನಿಧನರಾದರು. ಕೆಲವು ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.

ಅವರಿಗೆಪತ್ನಿ ಹಾಗೂ ಮೂವರು ಪುತ್ರರಿದ್ದಾರೆ.

ಖೇಮು ತುಳುಸು ಗೌಡ ಅವರಿಗೆ2018ರಲ್ಲಿ ಜಾನಪದ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಹಾಲಕ್ಕಿ ಸಮುದಾಯದ ವಿಶೇಷ ಕಲೆಗಳಾದ ಸುಗ್ಗಿ ಕುಣಿತ, ಗುಮುಟೆ ವಾದನ ಹಾಗೂ ಸುಗ್ಗಿಯ ತುರಾಯಿ ಕಟ್ಟುವುದರಲ್ಲಿ 50 ವರ್ಷಗಳಿಂದ ತಮ್ಮನ್ನು ತೊಡಗಿಸಿಕೊಂಡಿದ್ದರು. ಹೋಳಿ ಹಬ್ಬದ ಸಂದರ್ಭದಲ್ಲಿ ಊರೂರು ಅಲೆದು ಸುಗ್ಗಿ ಕುಣಿತದ ಪ್ರದರ್ಶನ ಮಾಡುತ್ತಿದ್ದರು. ಊರಿನ ಯುವಕರಿಗೂ ತರಬೇತಿ ನೀಡಿ ಈ ಕಲೆಯನ್ನು ಮುಂದುವರಿಸಿಕೊಂಡು ಹೋಗಲು ಪ್ರಯತ್ನಿಸಿದ್ದರು.

ADVERTISEMENT

ಅವರು ವಿಷಜಂತು ಕಡಿತ, ಮೂಲವ್ಯಾಧಿ, ನವಲೆಗಳಂತಹಹಲವು ರೋಗಗಳಿಗೆ ಗಿಡಮೂಲಿಕೆ ಔಷಧವನ್ನೂ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.