ADVERTISEMENT

‘ಜಾನಪದ ಕಲಾವಿದರ ಗಣತಿಯಾಗಲಿ’

​ಪ್ರಜಾವಾಣಿ ವಾರ್ತೆ
Published 3 ಜುಲೈ 2019, 20:00 IST
Last Updated 3 ಜುಲೈ 2019, 20:00 IST
ಬಿ.ಟಾಕಪ್ಪ ಕಣ್ಣೂರು
ಬಿ.ಟಾಕಪ್ಪ ಕಣ್ಣೂರು   

ಕಲಬುರ್ಗಿ: ‘ರಾಜ್ಯದ ವಿವಿಧ ಕಲಾ ಪ್ರಕಾರಗಳ ಕೆಲ ಜಾನಪದ ಕಲಾವಿದರು ಅಜ್ಞಾತ ಸ್ಥಿತಿಯಲ್ಲೇ ಇದ್ದು, ಅಂಥವರ ಪತ್ತೆಗೆ ರಾಜ್ಯವ್ಯಾಪಿ ಜಾನಪದ ಕಲಾವಿದರ ಗಣತಿ ಆಗಬೇಕಿದೆ’ ಎಂದು ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷ ಬಿ.ಟಾಕಪ್ಪ ಕಣ್ಣೂರು ತಿಳಿಸಿರು.

‘ಕಲಾವಿದರ ಗಣತಿಗೆ ಸರ್ಕಾರ ಮುಂದಾಗಬೇಕು. ಇಲ್ಲದಿದ್ದರೆ ಇದಕ್ಕೆ ತಗಲುವ ವೆಚ್ಚವನ್ನು ಸರ್ಕಾರ ಭರಿಸಿದರೆ ಅಕಾಡೆಮಿಯಿಂದಲೇ ಗಣತಿ ಮಾಡಲು ನಾವು ಸಿದ್ಧ’ ಎಂದು ಅವರು ಬುಧವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ನಗರ ಪ್ರದೇಶದ ಸುತ್ತಮುತ್ತ ಇರುವವರಿಗೆ ಮತ್ತು ಕೊಂಚ ಪ್ರಸಿದ್ಧಿ ಪಡೆದವರಿಗೆ ಮಾತ್ರ ಸರ್ಕಾರಿ ಸೌಲಭ್ಯ ಮತ್ತು ಪ್ರಶಸ್ತಿಗಳು ಸಿಗುತ್ತಿವೆ. ಆದರೆ, ಯಾವುದೇ ಪ್ರಚಾರವಿಲ್ಲದೇ ಕುಗ್ರಾಮಗಳಲ್ಲಿ ವಾಸವಿರುವ ಜಾನಪದ ಕಲಾವಿದರನ್ನು ಗುರುತಿಸುವ ಪ್ರಯತ್ನ ನಡೆದಿಲ್ಲ’ ಎಂದರು.

ADVERTISEMENT

‘ರಾಜ್ಯದಲ್ಲಿ ಒಟ್ಟು 5,160 ಜಾನಪದ ಕಲಾವಿದರಿಗೆ ಮಾಸಾಶನ ದೊರೆಯುತ್ತಿದೆ. ಇನ್ನೂ 3,615 ಕಲಾವಿದರನ್ನು ಪರಿಗಣಿಸಬೇಕು ಮತ್ತುಮಾಸಾಶನದ ಮೊತ್ತವನ್ನು ₹1,500 ರಿಂದ ₹ 4 ಸಾವಿರಕ್ಕೆ ಏರಿಕೆ ಮಾಡಬೇಕು ಎಂದು ಸರ್ಕಾರವನ್ನು ಕೋರಿದ್ದೇನೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.