ಹುಬ್ಬಳ್ಳಿ: ಅವಳಿ ನಗರಗಳನ್ನು ಸ್ವಚ್ಛಗೊಳಿಸುವ ಮಹಾನಗರ ಪಾಲಿಕೆಯ ಪೌರ ಕಾರ್ಮಿಕರಿಗೆ ಶನಿವಾರ ಬೆಳಿಗ್ಗೆ ನೀಡಿದ್ದ ಉಪಾಹಾರದಲ್ಲಿ ಹುಳಗಳು ಕಂಡು ಬಂದಿವೆ ಎಂದು ಧಾರವಾಡ ಜಿಲ್ಲಾ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಗಳ ಪೌರ ಕಾರ್ಮಿಕರ ಮತ್ತು ನೌಕರರ ಸಂಘದ ಅಧ್ಯಕ್ಷ ವಿಜಯ ಗುಂಟ್ರಾಳ ಆರೋಪಿಸಿದ್ದಾರೆ.
ವಾರ್ಡ್ ಸಂಖ್ಯೆ 56ರ ಮಂಗಳವಾರ ಪೇಟೆಯಲ್ಲಿ ಪೌರ ಕಾರ್ಮಿಕರು ಬೆಳಿಗ್ಗೆ ಅವಲಕ್ಕಿ ತಿನ್ನುವಾಗ ಬಾಲಹುಳಗಳು ಕಂಡು ಬಂದಿವೆ. ಆದ್ದರಿಂದ ತಂದಿದ್ದ ಆಹಾರವನ್ನು ವಾಪಸ್ ಕಳುಹಿಸಲಾಯಿತು. ಪೌರ ಕಾರ್ಮಿಕರಿಗೆ ಬೆಂಗಳೂರು ಮೂಲಕ ಕಂಪನಿಯೊಂದು ಉಪಾಹಾರ ವಿತರಿಸುವ ಗುತ್ತಿಗೆ ಪಡೆದುಕೊಂಡಿದೆ. ಆ ಕಂಪನಿ ವಿರುದ್ಧ ಪಾಲಿಕೆ ಆಯಕ್ತರು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಮಂಗಳವಾರ ಪೇಟೆಯಲ್ಲಿ ಕೆಲಸ ಮಾಡುತ್ತಿದ್ದ ಪೌರಕಾರ್ಮಿಕ ಬಸವರಾಜ ದೊಡ್ಡಮನಿ ‘ಎಂಟು ಜನ ಪೌರ ಕಾರ್ಮಿಕರು ಉಪಾಹಾರ ಸೇವಿಸಿದ್ದು, ಒಬ್ಬರು ವಾಂತಿ ಮಾಡಿಕೊಂಡಿದ್ದಾರೆ. ಇದನ್ನು ನೋಡಿ ಉಳಿದವರು ಯಾರೂ ಅವಲಕ್ಕಿ ತಿನ್ನಲಿಲ್ಲ’ ಎಂದರು. ಈ ಕುರಿತು ಪ್ರತಿಕ್ರಿಯೆ ಪಡೆಯಲು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರಿಗೆ ಫೋನ್ ಮಾಡಿದಾಗ ಕರೆ ಸ್ವೀಕರಿಸಲಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.