ADVERTISEMENT

ಬಿಳಿಗಿರಿರಂಗನ ಬೆಟ್ಟದಲ್ಲಿ ಕಾಳ್ಗಿಚ್ಚು

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2019, 18:58 IST
Last Updated 17 ಮಾರ್ಚ್ 2019, 18:58 IST
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬನದ ಆಕಾಶಬರೆ ಸಮೀಪ ಕಾಳ್ಗಿಚ್ಚಿನಿಂದ ಎದ್ದ ಹೊಗೆ
ಯಳಂದೂರು ತಾಲ್ಲೂಕಿನ ಬಿಳಿಗಿರಿರಂಗನಬನದ ಆಕಾಶಬರೆ ಸಮೀಪ ಕಾಳ್ಗಿಚ್ಚಿನಿಂದ ಎದ್ದ ಹೊಗೆ   

ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬನದ ಹುಲ್ಲು ಬೆಟ್ಟಗಳ ಸುತ್ತಮುತ್ತ ಭಾನುವಾರ ಮಧ್ಯಾಹ್ನ ಕಾಳ್ಗಿಚ್ಚು ಕಾಣಿಸಿಕೊಂಡಿತು.

ಬಿಆರ್‌ಟಿ ಬಾಳೆಬರೆ ವ್ಯಾಪ್ತಿಯ ಹುಲ್ಲು ಬೆಟ್ಟಗಳ ಸಾಲುಗಳ ನಡುವೆ ಮಧ್ಯಾಹ್ನ 1 ಗಂಟೆ ಸುಮಾರಿಗೆ ಬೆಂಕಿ ಕಾಣಿಸಿಕೊಂಡು ದಟ್ಟ ಹೊಗೆ ಆವರಿಸಿತ್ತು. 15 ಕಿ.ಮೀ. ದೂರದ ವರೆಗೂ ಹೊಗೆ ಕಾಣಿಸುತಿತ್ತು.

ಚಿಕ್ಕಮಲ್ಕಿ, ದೊಡ್ಡಮಲ್ಕಿ, ಆಕಾಶಬರೆ ಸಮೀಪ ಬೆಂಕಿ ಆವರಿಸಿತ್ತು. ನಂತರ ಒಣ ಉದುರೆಲೆ, ಅಲ್ಲಲ್ಲಿ ಕಂಡುಬರುವ ಸೋಲಾ ಅರಣ್ಯ, ಬೆಟ್ಟದ ಅಕ್ಕಪಕ್ಕದ ಸವನ್ನಾ ಹುಲ್ಲುಗಾವಲು ಹಾಗೂ ಬನದ ತಳಭಾಗದಲ್ಲಿ ಕಂಡುಬರುವ ಉದುರೆಲೆ ಕಾನನದ ಸುತ್ತಮುತ್ತ ಹೊಗೆ ಆವರಿಸಿತ್ತು. ಅಡವಿಯ ತುಂಬ ಬೆಳೆದಿರುವ ಲಂಟಾನ ಸಹ ಬೆಂಕಿ ಅವಘಡ ತೀವ್ರವಾಗಲು ಕಾರಣವಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದರು. ಸಂಜೆ 5ರ ವೇಳೆಗೆ ಕಾಳ್ಗಿಚ್ಚು ನಿಯಂತ್ರಣಕ್ಕೆ ಬಂದಿದೆ ಎಂದು ಯಳಂದೂರು ವಲಯ ಅರಣ್ಯ ಅಧಿಕಾರಿ ಮಾಹಿತಿ ನೀಡಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.