ADVERTISEMENT

ಕುಮಟಾ ಸಮೀಪ ದೋಣಿ ಮುಳುಗಡೆ: ಮೀನುಗಾರರ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2020, 13:58 IST
Last Updated 20 ಆಗಸ್ಟ್ 2020, 13:58 IST
ಕುಮಟಾ ತಾಲ್ಲೂಕಿನ ಧಾರೇಶ್ವರ ಬಳಿ ಅರಬ್ಬಿ ಸಮುದ್ರದಲ್ಲಿ ಗುರುವಾರ ಮುಳುಗಿದ ದೋಣಿಯನ್ನು ಇತರ ಮೀನುಗಾರಿಕಾ ದೋಣಿಗಳ ಮೂಲಕ ಎಳೆದುಕೊಂಡು ದಡಕ್ಕೆ ತರಲಾಯಿತು
ಕುಮಟಾ ತಾಲ್ಲೂಕಿನ ಧಾರೇಶ್ವರ ಬಳಿ ಅರಬ್ಬಿ ಸಮುದ್ರದಲ್ಲಿ ಗುರುವಾರ ಮುಳುಗಿದ ದೋಣಿಯನ್ನು ಇತರ ಮೀನುಗಾರಿಕಾ ದೋಣಿಗಳ ಮೂಲಕ ಎಳೆದುಕೊಂಡು ದಡಕ್ಕೆ ತರಲಾಯಿತು   

ಕುಮಟಾ: ತಾಲ್ಲೂಕಿನ ಧಾರೇಶ್ವರ ಬಳಿ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದ ಟ್ರಾಲರ್ ದೋಣಿಯೊಂದು ಗುರುವಾರ ಮುಳುಗಿದೆ. ಅದರಲ್ಲಿದ್ದ ನಾಲ್ವರು ಮೀನುಗಾರರನ್ನು ಅಕ್ಕಪಕ್ಕದ ದೋಣಿಗಳಲ್ಲಿದ್ದ ಮೀನುಗಾರರು ರಕ್ಷಿಸಿದ್ದಾರೆ.

ನೀರಿನಲ್ಲಿ ಮುಳುಗಿದ ದೋಣಿಯಲ್ಲಿದ್ದ ಮೋಹನ ಕೃಷ್ಣಪ್ಪ ಹರಿಕಾಂತ, ಮಂಜುನಾಥ ಬುದ್ಧು ಹರಿಕಾಂತ, ಮಹೇಂದ್ರ ಶಂಕರ ಗಾವಡಿ ಹಾಗೂ ವಿಠ್ಠಲ ಗಾವಡಿ ಪ್ರಾಣಾಪಾಯದಿಂದ ‍ಪಾರಾಗಿದ್ದಾರೆ. ಅವರನ್ನು ಬೇರೆ ದೋಣಿಯಲ್ಲಿ ತದಡಿ ಬಂದರಿಗೆ ಕರೆದುಕೊಂಡು ಬಂದು, ಅಲ್ಲಿಂದ ಕುಮಟಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಮುದ್ರದಲ್ಲಿ ಮುಳುಗಿದ್ದ ದೋಣಿಯನ್ನು ಎಳೆದು ದಡಕ್ಕೆ ತರಲಾಗಿದೆ.

‘ವಿಜಯಲಕ್ಷ್ಮೀ– 2’ ಹೆಸರಿನ ಈ ದೋಣಿಯುಕಿಮಾನಿಯ ಕೇಸರಿ ಮೋಹನ್ ಹರಿಕಾಂತ ಎಂಬುವರಿಗೆ ಸೇರಿದ್ದಾಗಿದೆ ಎಂದು ಮಿನುಗಾರಿಕಾ ಸಹಾಯಕ ನಿರ್ದೇಶಕ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.