ADVERTISEMENT

ಗಾಂಧೀಜಿ ಭೇಟಿಯ ಎಲ್ಲ ಸ್ಥಳಗಳಲ್ಲೂ ‘ಗಾಂಧಿ ವನ’: ಸರ್ವೋದಯ ಕರ್ನಾಟಕ ಸಂಘಟನೆ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2024, 23:23 IST
Last Updated 25 ಡಿಸೆಂಬರ್ 2024, 23:23 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ಬೆಂಗಳೂರು: ಗಾಂಧೀಜಿ ಅವರ ಅಧ್ಯಕ್ಷತೆಯಲ್ಲಿ ನಡೆದಿದ್ದ ಬೆಳಗಾವಿ ಕಾಂಗ್ರೆಸ್ ಅಧಿವೇಶನದ ಶತಮಾನೋತ್ಸವ ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಆಚರಿಸಬೇಕು. ಅವರು ಭೇಟಿ ನೀಡಿದ ಎಲ್ಲ ಸ್ಥಳಗಳಲ್ಲೂ ಐದು ಎಕರೆ ವಿಸ್ತೀರ್ಣದ ‘ಗಾಂಧಿ ವನ’ ರೂಪಿಸಬೇಕು ಎಂದು ಸರ್ವೋದಯ ಕರ್ನಾಟಕ ಸಂಘಟನೆ ಸಲಹೆ ನೀಡಿದೆ.

ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿರುವ ಸಂಘಟನೆಯ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ, ಸಾಹಿತಿ ಎಸ್.ಜಿ. ಸಿದ್ದರಾಮಯ್ಯ, ಮಾಜಿ ಶಾಸಕ ಮಹಿಮ ಪಟೇಲ್‌, ಪತ್ರಕರ್ತ ನಾಗೇಶ ಹೆಗಡೆ, ಶಿಕ್ಷಣತಜ್ಞ ವಿ.ಪಿ. ನಿರಂಜನಾರಾಧ್ಯ ಅವರು ಹಲವು ಸಲಹೆ ನೀಡಿದ್ದಾರೆ. 

ADVERTISEMENT

1924ರ ಬೆಳಗಾವಿ ಅಧಿವೇಶನದ ಶತಮಾನೋತ್ಸವ ಅಂಗವಾಗಿ ‘ಗಾಂಧಿ ಭಾರತ’ ಕಾರ್ಯಕ್ರಮ ಆಯೋಜನೆ ಸ್ವಾಗತಾರ್ಹ. ಜಗತ್ತಿನ ಬಹುತೇಕ ದೇಶಗಳು ಗಾಂಧಿ ಅವರ ಅಹಿಂಸೆ, ಸಮಾನತೆ, ಸೌಹಾರ್ದ ಮತ್ತು ಸರ್ವೋದಯ ಸಂದೇಶವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿವೆ. ಆದರೆ, ಭಾರತದಲ್ಲೇ ಗಾಂಧೀಜಿ ಹಾಗೂ ಅವರ ತತ್ವ, ಸಿದ್ಧಾಂತಗಳನ್ನು ನಿರ್ಲಕ್ಷಿಸುವ, ಕಡೆಗಣಿಸುವ ಹಾಗೂ ಅಪಪ್ರಚಾರ ಮಾಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದೆ ಎಂದು ಪತ್ರದಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಗಾಂಧಿ ತತ್ವದ ಸರ್ವಧರ್ಮಸಮನ್ವಯವನ್ನು ಕದಡಿ ಕೋಮುಶಕ್ತಿಗಳನ್ನು ಪೋಷಿಸುವ, ಜಾತಿ ಧರ್ಮಗಳ ನಡುವೆ ವಿಷಬೀಜ ಬಿತ್ತುವ ಕೆಲಸವನ್ನು ವ್ಯವಸ್ಥಿತವಾಗಿ ಮಾಡಲಾಗುತ್ತಿದೆ. ಇಂತಹ ಸಮಯದಲ್ಲೇ ಕರ್ನಾಟಕ ಸರ್ಕಾರವು ‘ಗಾಂಧಿ ಭಾರತ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕಳೆದುಕೊಂಡಿರುವ ಗಾಂಧಿ ತತ್ವಗಳ ಪುನರ್‌ಸ್ಥಾಪನೆಗೆ ಕಾರ್ಯಕ್ರಮ ರೂಪಿಸಿರುವುದು ಆರೋಗ್ಯಕರ ಮನಸ್ಥಿತಿಯ ಸೂಚಕವಾಗಿದೆ ಎಂದು ಶ್ಲಾಘಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.