ADVERTISEMENT

ತೀರ್ಥಹಳ್ಳಿ: ಕಾಡುಕೋಣಗಳ ಸರಣಿ ಸಾವು

​ಪ್ರಜಾವಾಣಿ ವಾರ್ತೆ
Published 12 ಜುಲೈ 2019, 19:45 IST
Last Updated 12 ಜುಲೈ 2019, 19:45 IST
ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಗುದ್ದು ಗ್ರಾಮದಲ್ಲಿ ಶುಕ್ರವಾರ ಕಾಡುಕೋಣ ಮೃತಪಟ್ಟಿರುವುದು
ತೀರ್ಥಹಳ್ಳಿ ತಾಲ್ಲೂಕಿನ ಹಾರೋಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಗುದ್ದು ಗ್ರಾಮದಲ್ಲಿ ಶುಕ್ರವಾರ ಕಾಡುಕೋಣ ಮೃತಪಟ್ಟಿರುವುದು   

ತೀರ್ಥಹಳ್ಳಿ: ತಾಲ್ಲೂಕಿನ ಹಾರೋಗೊಳಿಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಗುದ್ದು ಗ್ರಾಮದಲ್ಲಿ ಕಾಡುಕೋಣ ಮೃತಪಟ್ಟಿರುವುದು ಶುಕ್ರವಾರ ಪತ್ತೆಯಾಗಿದೆ.

ಕಳೆದ 3-4 ತಿಂಗಳಿನಿಂದ ಈ ಭಾಗದಲ್ಲಿ ಕಾಡುಕೋಣಗಳು ಮೃತಪಡುತ್ತಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮೇಲಿನಕುರುವಳ್ಳಿ, ಹಾರೋಗೊಳಿಗೆ, ದೇವಂಗಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈಗಾಗಲೇ ನಾಲ್ಕು ಕಾಡುಕೋಣಗಳು ಮೃತಪಟ್ಟಿವೆ.

ADVERTISEMENT

ಎರಡು ತಿಂಗಳ ಹಿಂದೆ ವಯಸ್ಸಾಗಿದ್ದ ಕಾಡುಕೋಣವೊಂದು ಮೇಲಿನಕುರುವಳ್ಳಿಯಲ್ಲಿ ಮೃತ ಪಟ್ಟಿತ್ತು. ಇನ್ನೊಂದು ಕಾಡುಕೋಣ ನೀರು ಕುಡಿಯುವ ಸಲುವಾಗಿ ದೇವಂಗಿ ಬಳಿಯ ತೋಟದ ಬಾವಿಯೊಳಗೆ ಬಿದ್ದು ಮೃತಪಟ್ಟಿತ್ತು.

ಹುಲಿಗುದ್ದು ಗ್ರಾಮದಲ್ಲಿ ಮೂರು ದಿನಗಳ ಹಿಂದೆ ಒಂದು ಕಾಡುಕೋಣ ಮೃತಪಟ್ಟಿದೆ. ಇನ್ನೊಂದು ಕಾಡುಕೋಣ ಇದೇ ಪ್ರದೇಶದಲ್ಲಿ ಮೃತಪಟ್ಟಿರುವುದು ಶುಕ್ರವಾರ ಗೊತ್ತಾಗಿದೆ.

‘ಮೃತಪಟ್ಟ ಕಾಡುಕೋಣಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜಠರ ಹಾಗೂ ಹೃದಯ ಸಂಬಂಧಿ ಕಾಯಿಲೆಗಳಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ’ ಎಂದು ತೀರ್ಥಹಳ್ಳಿ ವಲಯ ಅರಣ್ಯಾಧಿಕಾರಿ ಮಂಜುನಾಥ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.