ADVERTISEMENT

ಮಿಸ್ಡ್ ಕಾಲ್ ಕೊಡಿ, ಕತೆ ಕೇಳಿ!

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 18:03 IST
Last Updated 7 ನವೆಂಬರ್ 2020, 18:03 IST

ಬೆಂಗಳೂರು: ಹಬ್ಬದ ಸಂದರ್ಭದಲ್ಲಿ ಉಚಿತವಾಗಿ ಕತೆ ಕೇಳುವ ಅವಕಾಶವನ್ನು ಪ್ರಥಮ್‌ ಬುಕ್ಸ್ ನೀಡುತ್ತಿದೆ. ಮಿಸ್ಡ್ ಕಾಲ್ ಕೊಟ್ಟರೆ ವಿವಿಧ ಭಾಷೆಯ ಹಲವು ಕಥೆಗಳನ್ನು ಮಕ್ಕಳು ಆಲಿಸಬಹುದು. ಕಾಗ್ನಿಜಂಟ್‌ ಫೌಂಡೇಷನ್‌ ಸಹಯೋಗದಲ್ಲಿ ಈ ‘ಮಿಸ್ಡ್ ಕಾಲ್‌ ಕೊಡಿ, ಕಥೆ ಕೇಳಿ’ ಅಭಿಯಾನವನ್ನು ಪ್ರಥಮ್‌ ಬುಕ್ಸ್ ಆರಂಭಿಸಿದೆ.

080–68264448 ಸಂಖ್ಯೆಗೆ ಮಿಸ್ ಕಾಲ್ ಕೊಟ್ಟರೆ ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ಮರಾಠಿಯಲ್ಲಿ ಆಡಿಯೊ ಕತೆಗಳನ್ನು ಕೇಳಬಹುದು. ಮಿಸ್ ಕಾಲ್ ಕೊಡಲು ಮಕ್ಕಳು ಬೇಸಿಕ್ ಹ್ಯಾಂಡ್ ಸೆಟ್ ಕೂಡ ಉಪಯೋಗಿಸಬಹುದು. ಮಿಸ್ ಕಾಲ್‌ಗೆ ಯಾವುದೇ ಶುಲ್ಕವಿರುವುದಿಲ್ಲ. ನಂತರ ಮರುಕರೆ (ಕಾಲ್ ಬ್ಯಾಕ್) ಬರುತ್ತದೆ. ಆಗ ಭಾಷೆ ಮತ್ತು ಮಗುವಿನ ವಯಸ್ಸಿಗನುಗುಣವಾಗಿ ಕತೆಗಳನ್ನು ಆಯ್ಕೆ ಮಾಡಿ, ಕೇಳಬಹುದು.

‘ಕೋವಿಡ್ ಕಾರಣದಿಂದ ಶಾಲೆಗಳು ಮುಚ್ಚಿರುವ ಈ ಸಂದರ್ಭದಲ್ಲಿ ಮಕ್ಕಳು ಈ ಸೌಲಭ್ಯವನ್ನು ಬಳಸಿಕೊಳ್ಳ
ಬಹುದು. ಲಾಕ್‌ಡೌನ್‌ ಪ್ರಾರಂಭದಲ್ಲಿ ಈ ಅಭಿಯಾನ ಆರಂಭಿಸಲಾಗಿತ್ತು. ಏಪ್ರಿಲ್, ಮೇ, ಜೂನ್‌ನಲ್ಲಿ ದೇಶದಾದ್ಯಂತ 1.6 ಲಕ್ಷ ಮಕ್ಕಳು 3.6 ಲಕ್ಷ ಮಕ್ಕಳು ಕತೆ ಆಲಿಸಿದ್ದರು’ ಎಂದು ಸಂಸ್ಥೆ ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.