ADVERTISEMENT

ಗೋವಾ ಕನ್ನಡಿಗರಿಗೆ ಉಚಿತ ಆಹಾರಧಾನ್ಯ ಪೂರೈಕೆ

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 11:15 IST
Last Updated 5 ಏಪ್ರಿಲ್ 2020, 11:15 IST
ವಿಜಯಪುರದ ಎಂ.ಬಿ.ಪಾಟೀಲ್ ಫೌಂಡೇಶನ್‌ನಿಂದ ಗೋವಾ ಕನ್ನಡಿಗರಿಗೆ ನೆರವಾಗಲು ಆಹಾರ-ಧಾನ್ಯಗಳ ಕಿಟ್‍ಗಳನ್ನು ತುಂಬಿದ ಎರಡು ಲಾರಿಗಳು ಗೋವಾಕ್ಕೆ ಭಾನುವಾರ ಕಳುಹಿಸಿಕೊಡಲಾಯಿತು
ವಿಜಯಪುರದ ಎಂ.ಬಿ.ಪಾಟೀಲ್ ಫೌಂಡೇಶನ್‌ನಿಂದ ಗೋವಾ ಕನ್ನಡಿಗರಿಗೆ ನೆರವಾಗಲು ಆಹಾರ-ಧಾನ್ಯಗಳ ಕಿಟ್‍ಗಳನ್ನು ತುಂಬಿದ ಎರಡು ಲಾರಿಗಳು ಗೋವಾಕ್ಕೆ ಭಾನುವಾರ ಕಳುಹಿಸಿಕೊಡಲಾಯಿತು   

ವಿಜಯಪುರ: ಕೊರೊನಾ ಸೋಂಕಿನ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಆಗಿರುವುದರಿಂದ ಸಂಕಷ್ಟಕ್ಕೆ ಒಳಗಾಗಿರುವ ಗೋವಾ ಕನ್ನಡಿಗರಿಗೆ ನೆರವಾಗಲು ಎಂ.ಬಿ.ಪಾಟೀಲ್ ಫೌಂಡೇಶನ್ ಮೂಲಕ ಆಹಾರ-ಧಾನ್ಯಗಳ ಕಿಟ್‍ಗಳನ್ನು ಉಚಿತವಾಗಿ ಪೂರೈಸಲಾಯಿತು.

ಎರಡು ಸಾವಿರ ಕಿಟ್‌ಗಳನ್ನು ಎರಡು ಲಾರಿಗಳಲ್ಲಿ ತುಂಬಿ ವಿಜಯಪುರದಿಂದ ಗೋವಾಕ್ಕೆ ಭಾನುವಾರ ಕಳುಹಿಸಿಕೊಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಫೌಂಡೇಶನ್ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ್, 5 ಕೆ.ಜಿ ಗೋಧಿ ಹಿಟ್ಟು, 3ಕೆ.ಜಿ ಅಕ್ಕಿ, 1ಕೆ.ಜಿ ಬೇಳೆ, 1ಲೀಟರ್ ಎಣ್ಣೆ, ಮಸಾಲೆ ಪದಾರ್ಥಗಳು, ಉಪ್ಪು, ಖಾರ ಸೇರಿದಂತೆ ದಿನನಿತ್ಯದ ಅಗತ್ಯ ಸಾಮಗ್ರಿಗಳನ್ನುಪ್ರತಿ ಕಿಟ್‍ ಒಳಗೊಂಡಿದೆ ಎಂದರು.

ADVERTISEMENT

ಗೋವಾ ಸಚಿವ ಮೈಕಲ್ ಲೋಬೊ ಅವರ ವಿಶೇಷ ಅಧಿಕಾರಿ, ಕನ್ನಡಿಗ ದಿನೇಶ ಹಾಗೂ ವಿಜಯಪುರದ ಸುರೇಶ ಹಂಚನಾಳ ಅವರು ಗೋವಾ ಕನ್ನಡಿಗರಿಗೆ ಈ ಕಿಟ್‍ಗಳನ್ನು ತಲುಪಿಸುವ ಕಾರ್ಯ ಮಾಡಲಿದ್ದಾರೆ ಎಂದು ಎಂ.ಬಿ.ಪಾಟೀಲ್ ಫೌಂಡೇಶನ್ ನಿರ್ದೇಶಕ ಡಾ.ಮಹಾಂತೇಶ ಬಿರಾದಾರ ತಿಳಿಸಿದರು.

ಫೌಂಡೇಶನ್ ನಿರ್ದೇಶಕ ಡಾ.ಗಂಗಾಧರ ಸಂಬಣ್ಣಿ, ನಾಗರಾಜ ಅಳ್ಳೊಳ್ಳಿ, ಲಕ್ಷ್ಮಣ ಇಳಕಲ್, ಸಂತೋಷ ಬಾಲಗಾಂವಿ, ವಿಜಯ ಕಾಳೆ, ನಿಂಗಪ್ಪ ಸಂಗಾಪುರ, ಜಗದೀಶ ರೆಬಿನಾಳ, ಶಿವಾನಂದ ಜಕ್ಕನ್ನವರ, ಪುಂಡಲಿಕ್ ರಾಠೋಡ, ಸಂತೋಷ ಬಾಗಾಡಿಯಾ, ಬಿ.ಎಲ್.ಡಿ.ಇ ನಿರ್ದೇಶಕ ಸಂಗು ಸಜ್ಜನ, ವಿಡಿಎ ಮಾಜಿ ಅಧ್ಯಕ್ಷ ಚಂದ್ರಕಾಂತ ಶೆಟ್ಟಿ, ಶರಣಪ್ಪ ಯಕ್ಕುಂಡಿ, ದಿನೇಶ ಹಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.