ADVERTISEMENT

ಬೀಚ್‌ಗಳಲ್ಲಿ ಕನಿಷ್ಠ ವಸ್ತ್ರಸಂಹಿತೆ ಜಾರಿಗೊಳಿಸಲು ಒತ್ತಾಯ

ಬೀಚ್‌ಗಳಲ್ಲಿ ಕನಿಷ್ಠ ವಸ್ತ್ರಸಂಹಿತೆ, ಭದ್ರತೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2018, 20:03 IST
Last Updated 20 ನವೆಂಬರ್ 2018, 20:03 IST

ಬೆಂಗಳೂರು: ರಾಜ್ಯ ಕರಾವಳಿ ಬೀಚ್‌ಗಳಲ್ಲಿ ಕನಿಷ್ಠ ವಸ್ತ್ರ ಸಂಹಿತೆ ಜಾರಿಗೆ ತರುವುದರ ಜತೆಗೆ ಪೊಲೀಸ್‌ ಭದ್ರತೆಯನ್ನೂ ಹೆಚ್ಚಿಸಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಮುಖ್ಯಮಂತ್ರಿಯವರಿಗೆ ಪತ್ರ ಬರೆದಿದ್ದಾರೆ.

ಇತ್ತೀಚೆಗೆ ಗೋಕರ್ಣಕ್ಕೆ ಭೇಟಿ ನೀಡಿದಾಗ ದೇವಸ್ಥಾನದಿಂದ 100 ಮೀಟರ್‌ ದೂರದಲ್ಲಿರುವ ಬೀಚ್‌ನಲ್ಲಿ ಕೆಲವು ಪುರುಷರು ನಗ್ನರಾಗಿ ಓಡಾಡುತ್ತಿದ್ದರು. ಇದರಿಂದ ಸಾರ್ವಜನಿಕರಿಗೆ ಬೀಚ್‌ ಕಡೆ ಹೋಗಲು ಮುಜುಗರವಾಗುವಂತಾಗಿತ್ತು. ಹೆಣ್ಣು ಮಕ್ಕಳು ಓಡಾಡದ ಸ್ಥಿತಿ ನಿರ್ಮಾಣವಾಗಿತ್ತು. ಇದಕ್ಕೆ ಕಡಿವಾಣ ಹಾಕಬೇಕು ಎಂದರು.

ರಾಜ್ಯದಲ್ಲಿ ಸುಮಾರು 22 ಬೀಚ್‌ಗಳಿವೆ. ಸಾಮಾನ್ಯವಾಗಿ ಎಲ್ಲ ಬೀಚ್‌ಗಳ ಸಮೀಪದಲ್ಲಿ ದೇವಸ್ಥಾನಗಳಿವೆ. ಭಕ್ತರು ದೇವಸ್ಥಾನಗಳಿಗೆ ಬಂದಾಗ ಸಮುದ್ರ ತೀರಕ್ಕೆ ಹೋಗುತ್ತಾರೆ. ಇಂತಹವರಿಗೆ ರಕ್ಷಣೆ ನೀಡಬೇಕು. ಧಾರ್ಮಿಕ ಕ್ಷೇತ್ರಗಳ ಪಾವಿತ್ರ್ಯಕಾಪಾಡಬೇಕು. ಬೀಚ್‌ಗಳಲ್ಲಿ ಕಾನ್ಸಸ್ಟೇಬಲ್‌ ಗಳನ್ನು ನಿಯೋಜಿಸಬೇಕು ಎಂದಿದ್ದಾರೆ.

ADVERTISEMENT

ಕರ್ನಾಟಕದ ಬೀಚ್‌ಗಳನ್ನು ಗೋವಾ ಬೀಚ್‌ ಆಗಲು ಬಿಡಬಾರದು. ಮದ್ಯಪಾನ ಮಾಡಿ ಅಸಭ್ಯವಾಗಿ ವರ್ತಿಸುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕು. ವೀಕೆಂಡ್‌ ಮೋಜು ಮಸ್ತಿಗಾಗಿ ಬೆಂಗಳೂರು ಸೇರಿದಂತೆ ಮಹಾನಗರಗಳಿಂದ ಅಲ್ಲಿಗೆ ಹೋಗುವ ಯುವ ಜನತೆ ಬೀಚ್‌ಗಳನ್ನು ಹಾಳು ಮಾಡಿಡುತ್ತಿದ್ದಾರೆ ಎಂದು ನಾಗಲಕ್ಷ್ಮಿ ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.