
ಬೆಂಗಳೂರು: ರಾಜ್ಯಪಾಲರ ವಿರುದ್ಧ ಗೂಂಡಾಗಿರಿ ತೋರಿರುವ ಕಾಂಗ್ರೆಸ್ ಕಾರ್ಯಕರ್ತರ ಹೊಣೆಗಾರಿಕೆಯನ್ನು ಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಛಲವಾದಿ ನಾರಾಯಣಸ್ವಾಮಿ ಒತ್ತಾಯಿಸಿದರು.
‘ಮುಡಾ ಹಗರಣ, ವಾಲ್ಮೀಕಿ ನಿಗಮದ ಹಣ ವರ್ಗಾವಣೆ, ಶೇ 40 ಕಮಿಷನ್ ಆರೋಪಗಳು ಸರ್ಕಾರವನ್ನು ಜನರ ಮುಂದೆ ನಗ್ನಗೊಳಿಸಿವೆ. ಈ ಹಗರಣಗಳಿಂದ ಜನರ ಗಮನ ತಪ್ಪಿಸಲು ರಾಜ್ಯಪಾಲರ ಭಾಷಣವನ್ನು ವಿವಾದಕ್ಕೆ ಎಳೆದು ತರುತ್ತಿದ್ದಾರೆ. ಚುನಾಯಿತ ಸರ್ಕಾರಕ್ಕೆ ಜನರ ಸೇವೆ ಮಾಡುವ ಮ್ಯಾಂಡೇಟ್ ಇದೆಯೇ ಹೊರತು, ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸುವ ಅಧಿಕಾರವಿಲ್ಲ’ ಎಂದರು.
‘ಎನ್‌ಇಪಿ ರದ್ಧತಿ, ತೆರಿಗೆ ಹಂಚಿಕೆ, ಅನುದಾನ ವಿಚಾರಗಳಲ್ಲಿ ಕಾಂಗ್ರೆಸ್ ಸರ್ಕಾರ ರಾಜ್ಯಪಾಲರ ಭಾಷಣದ ಪಠ್ಯದಲ್ಲಿ ಹಸಿ ಸುಳ್ಳುಗಳನ್ನು ಸೇರಿಸಿದೆ. ಸುಳ್ಳು ಹೇಳದಿರುವುದು ರಾಜ್ಯಪಾಲರ ಪರಮಾಧಿಕಾರ. ಅದನ್ನು ಅವರು ಬಳಸಿದಾಗ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸುವುದು ಅವರ ರಾಜಕೀಯ ಹತಾಶೆಯನ್ನು ತೋರಿಸುತ್ತದೆ’ ಎಂದು ಎನ್. ರವಿಕುಮಾರ್ ಹೇಳಿದರು.
‘ರಾಜ್ಯಪಾಲರು ತಮ್ಮ ವಿವೇಚನಾಧಿಕಾರವನ್ನು ಬಳಸಿರುವುದು ಸಂಪೂರ್ಣವಾಗಿ ಸಂವಿಧಾನಸಮ್ಮತ. ಇದನ್ನು ಪ್ರಶ್ನಿಸುವ ಕಾಂಗ್ರೆಸ್ ಸರ್ಕಾರ ಮೊದಲು ಸಂವಿಧಾನ ಓದಲಿ, ಅರ್ಥಮಾಡಿಕೊಳ್ಳಲಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.