ADVERTISEMENT

ಗ್ರೀನ್‌ಬಡ್ಸ್‌ ವಂಚನೆ| ತ್ವರಿತ ನ್ಯಾಯಕ್ಕೆ ಆಗ್ರಹಿಸಿ ಠೇವಣಿದಾರರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 18 ಜೂನ್ 2019, 17:48 IST
Last Updated 18 ಜೂನ್ 2019, 17:48 IST
ಗ್ರೀನ್‌ಬಡ್ಸ್ ಅಗ್ರೊಫಾರ್ಮ್‌ ಕಂಪನಿಯಿಂದ ವಂಚನೆಗೆ ಒಳಗಾದವರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು
ಗ್ರೀನ್‌ಬಡ್ಸ್ ಅಗ್ರೊಫಾರ್ಮ್‌ ಕಂಪನಿಯಿಂದ ವಂಚನೆಗೆ ಒಳಗಾದವರು ಮೈಸೂರಿನ ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು   

ಮೈಸೂರು: ಗ್ರೀನ್‌ಬಡ್ಸ್ ಆಗ್ರೊ ಫಾರ್ಮ್‌ ಕಂಪನಿಯಿಂದ ವಂಚನೆಗೆ ಒಳಗಾದವರು, ಇಲ್ಲಿನ ಜಿಲ್ಲಾಧಿಕಾರಿ ಕಚೇರಿಗೆ ಮಂಗಳವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಗ್ರೀನ್‌ಬಡ್ಸ್‌ ಕಾರ್ಯಕರ್ತರು ಹಾಗೂ ಠೇವಣಿದಾರರ ರಕ್ಷಣಾ ಸಮಿತಿ ನೇತೃತ್ವದಲ್ಲಿ ಸೇರಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

‘ಐಎಂಎ ವಂಚನೆ ಕುರಿತು ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳುತ್ತಿದೆ. ಇದೇ ರೀತಿ ಗ್ರೀನ್‌ಬಡ್ಸ್ ಆಗ್ರೊಫಾರ್ಮ್‌ ಕಂಪನಿ ವಂಚನೆ ಪ್ರಕರಣದಲ್ಲೂ ಕ್ರಮ ಕೈಗೊಳ್ಳಬೇಕು. ವಂಚಿತರಿಗೆ ನ್ಯಾಯ ಕೊಡಿಸಬೇಕು’ ಎಂದು ಹೋರಾಟಗಾರ ಕುರುಬೂರು ಶಾಂತಕುಮಾರ್ ಒತ್ತಾಯಿಸಿದರು.

ADVERTISEMENT

ಕಂಪನಿಯಿಂದ ಒಟ್ಟು 1.75 ಲಕ್ಷ ಜನರಿಗೆ ವಂಚನೆಯಾಗಿದೆ. ಇವರೆಲ್ಲರೂ ದಾಖಲಾತಿ ಸಲ್ಲಿಸಿದ್ದು, ನ್ಯಾಯ ದೊರಕಿಸಿಕೊಡಬೇಕು. ಇಲ್ಲದಿದ್ದರೆ ಬೃಹತ್‌ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ಗ್ರೀನ್‌ಬಡ್ಸ್ ಸಂಸ್ಥೆಯು, 2013ರಲ್ಲಿ ಒಟ್ಟು ₹ 54ಕ್ಕೂ ಅಧಿಕ ಕೋಟಿ ರೂಪಾಯಿಯನ್ನು ತನ್ನ ಗ್ರಾಹಕರಿಗೆ ವಂಚಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.