ADVERTISEMENT

ಗೋದಾವರಿ-ಕೃಷ್ಣಾ-ಕಾವೇರಿ ಜೋಡಣೆ: ರಾಜ್ಯಕ್ಕೆ 25 ಟಿಎಂಸಿ ಅಡಿ ಮೀಸಲಿಡಿ: ದೇವೇಗೌಡ

ಗೋದಾವರಿ - ಕೃಷ್ಣಾ - ಕಾವೇರಿ ನದಿಗಳ ಜೋಡಣೆ ಯೋಜನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2025, 16:19 IST
Last Updated 21 ಫೆಬ್ರುವರಿ 2025, 16:19 IST
ಸಿ.ಆರ್‌.ಪಾಟೀಲ ಹಾಗೂ ದೇವೇಗೌಡ ಹಸ್ತಲಾಘವ ಮಾಡಿದರು. 
ಸಿ.ಆರ್‌.ಪಾಟೀಲ ಹಾಗೂ ದೇವೇಗೌಡ ಹಸ್ತಲಾಘವ ಮಾಡಿದರು.    

ನವದೆಹಲಿ: ಕರ್ನಾಟಕದ ನೀರಾವರಿ ಯೋಜನೆಗಳ ಬಗ್ಗೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ ಅವರೊಂದಿಗೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಚರ್ಚೆ ನಡೆಸಿದರು.

ನವದೆಹಲಿಯಲ್ಲಿರುವ ತಮ್ಮ ನಿವಾಸಕ್ಕೆ ಬಂದ ಕೇಂದ್ರ ಸಚಿವರೊಂದಿಗೆ ದೇವೇಗೌಡರು ರಾಜ್ಯಕ್ಕೆ ಸಂಬಂಧಪಟ್ಟ ಅಂತರರಾಜ್ಯ ನೀರಾವರಿ ವಿವಾದಗಳು, ರಾಜ್ಯ ಎದುರಿಸುತ್ತಿರುವ ಜಲ ಸಂಕಷ್ಟ, ರಾಜ್ಯದ ನೀರಾವರಿ ಯೋಜನೆಗಳಿಗೆ ತ್ವರಿತ ಅನುಮೋದನೆ ಮತ್ತು ಅಗತ್ಯ ಅನುದಾನ ನೀಡುವ ವಿಷಯಗಳ ಬಗ್ಗೆ ಮಾತುಕತೆ ನಡೆಸಿದರು.

ರಾಜ್ಯದ ಜಲ ವಿವಾದಗಳ ಬಗ್ಗೆ ಸಚಿವರು ಮಾಹಿತಿ ಪಡೆದುಕೊಂಡರು. ಅಲ್ಲದೆ, ಗೋದಾವರಿ - ಕೃಷ್ಣಾ - ಕಾವೇರಿ ನದಿಗಳ ಜೋಡಣೆಯ ಯೋಜನೆಯಲ್ಲಿ ರಾಜ್ಯಕ್ಕೆ 25 ಟಿಎಂಸಿ ಅಡಿಯಷ್ಟು ನೀರು ಹಂಚಿಕೆ ಮಾಡಬೇಕು ಎಂದು ದೇವೇಗೌಡ ಮನವಿ ಮಾಡಿದರು. ಇದಕ್ಕೆ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.