ADVERTISEMENT

ಎಚ್. ವಿಶ್ವನಾಥ್‌ಗೂ ಸೂಕ್ತ ಸ್ಥಾನ: ಸಚಿವ ಸೋಮಶೇಖರ್

​ಪ್ರಜಾವಾಣಿ ವಾರ್ತೆ
Published 19 ಜೂನ್ 2020, 10:44 IST
Last Updated 19 ಜೂನ್ 2020, 10:44 IST
ಎಸ್‌.ಟಿ.ಸೋಮಶೇಖರ್‌
ಎಸ್‌.ಟಿ.ಸೋಮಶೇಖರ್‌   

ಬಳ್ಳಾರಿ: ಸಮ್ಮಿಶ್ರ ಸರ್ಕಾರ‌ ಪತನಗೊಂಡು ಬಿಜೆಪಿ‌ ಸರ್ಕಾರ ರಚನೆಯಾಗಲು ಕಾರಣರಾದ ಎಚ್.ವಿಶ್ವನಾಥ್ ಅವರಿಗೂ ಸೂಕ್ತ ಸ್ಥಾನ ದೊರಕುತ್ತದೆ. ಆ ಬಗ್ಗೆ‌ ಮುಖ್ಯಮಂತ್ರಿ‌ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ‌ ಚರ್ಚಿಸಲಾಗಿದೆ. ಅವರೂ ಒಪ್ಪಿಕೊಂಡಿದ್ದಾರೆ ಎಂದು ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ಚನಾಥ್‌ ಅವರ ವಿಚಾರ‌ ಕುರಿತು ಮುಖ್ಯಮಂತ್ರಿಯೊಂದಿಗೇ ನಾನೇ ಎರಡು ಗಂಟೆ‌ಕಾಲ ಮಾತನಾಡಿರುವೆ ಎಂದರು.

ತಮಗೆ ವಿಧಾನ ಪರಿಷತ್‌ ಚುನಾವಣೆಯ

ADVERTISEMENT

ಪರಿಷತ್ ಟಿಕೆಟ್ ತಪ್ಪಲು ಸಿದ್ದರಾಮಯ್ಯ ಹಾಗೂ ಎಚ್. ಡಿ.ಕುಮಾರಸ್ವಾಮಿ ಕಾರಣ ಎಂಬ ವಿಶ್ವನಾಥ್ ಅವರ ಹೇಳಿಕೆ ಸುಳ್ಳು. ಅವರಿಗೂ ಬಿಜೆಪಿಗೂ ಸಂಬಂಧವಿಲ್ಲ. ವಿಶ್ವನಾಥ್ ಅವರಿಗೆ ಸೂಕ್ತ ಸ್ಥಾನ ನೀಡುವ ಕುರಿತು ಕೋರ್ ಕಮಿಟಿಯಿಂದ ಯಾವ‌ ಅಡೆತಡೆಯೂ ಇಲ್ಲ. ವಿಶ್ವನಾಥ್ ಅವರೂ ಸಂತೋಷವಾಗಿಯೇ ಇದ್ದಾರೆ ಎಂದು ಹೇಳಿದರು.

'ಸಮ್ಮಿಶ್ರ ಸರ್ಕಾರದಲ್ಲಿದ್ದಾಗ ಮೊದಲು ರಾಜೀನಾಮೆ ಕೊಟ್ಟಿದ್ದು ಆನಂದ್ ಸಿಂಗ್. ಆಗ ಎಲ್ಲರೂ ರಾಜೀನಾಮೆ ಕೊಡುತ್ತೇವೆ ಎನ್ನುತ್ತಿದ್ದರಷ್ಟೆ. ಆದರೆ ಯಾರೂ ಕೊಡಲಿಲ್ಲ, ಆನಂದ್ ಸಿಂಗ್ ಮೊದಲು ಕೊಟ್ಟರು- ನಂತರ ನಾವು ಕೊಟ್ಟೆವು ಎಂದು ಸ್ಮರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.