ADVERTISEMENT

ಹಂಪಿ ಕನ್ನಡ ವಿವಿ: ಕವಿ ಕಾವ್ಯ ಸಂಭ್ರಮ, ಬೆಳ್ಳಿಹಬ್ಬ ರದ್ದು

​ಪ್ರಜಾವಾಣಿ ವಾರ್ತೆ
Published 28 ಜನವರಿ 2019, 8:24 IST
Last Updated 28 ಜನವರಿ 2019, 8:24 IST
   

ಹೊಸಪೇಟೆ: ಜನವರಿ 31ರಂದು ಹಮ್ಮಿಕೊಂಡಿದ್ದ ಕವಿ ಕಾವ್ಯ ಸಂಭ್ರಮ, ಫೆಬ್ರುವರಿ 1ಕ್ಕೆ ನಿಗದಿಯಾಗಿದ್ದ ಬೆಳ್ಳಿಹಬ್ಬದ ಸಮಾರೋಪ ರದ್ದುಪಡಿಸಲಾಗಿದೆ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಮಲ್ಲಿಕಾ ಎಸ್‌. ಘಂಟಿ ಹೇಳಿದರು.

ಸಮಾರಂಭಕ್ಕೆ ಪತ್ರಕರ್ತ ವಿಶ್ವೇಶ್ವರ ಭಟ್ ಅವರನ್ನು ಆಹ್ವಾನಿಸಿದ್ದರಿಂದ ವಿವಾದ ಉಂಟಾಗಿತ್ತು. ’ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಚರ್ಚೆ ಆಗಿದ್ದರಿಂದ ಬೆಳ್ಳಿಹಬ್ಬ ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ’ ಎಂದು ಮಲ್ಲಿಕಾ ಘಂಟಿ ಹೇಳಿಕೆ.

ಜ.30ಕ್ಕೆ ಘಟಿಕೋತ್ಸವ(ನುಡಿಹಬ್ಬ) ನಡೆಯಲಿದ್ದು, ಇಬ್ಬರಿಗೆ ಡಿ.ಲಿಟ್., 87 ಜನಕ್ಕೆ ಪಿಎಚ್.ಡಿ., 26 ಮಂದಿಗೆ ಎಂ.ಫಿಲ್ ಸೇರಿದಂತೆ ವಿವಿಧ ಕೋರ್ಸ್ ಮುಗಿಸಿರುವ ಒಟ್ಟು 645 ಜನರಿಗೆ ಪದವಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

ADVERTISEMENT

ವಿಜ್ಞಾನಿ ಎ.ಎಸ್.ಕಿರಣ ಕುಮಾರ ನುಡಿಹಬ್ಬ ಭಾಷಣ ಮಾಡುವರು. ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪದವಿ ಪ್ರದಾನ ಮಾಡಲಿದ್ದು, ರಾಜ್ಯಪಾಲ ವಜುಭಾಯಿ ವಾಲಾ ಅಧ್ಯಕ್ಷತೆ ವಹಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.