ADVERTISEMENT

ನಾಲ್ಕು ದಿನದ ನಂತರ ಗೋಚರಿಸಿದ ಹಂಪಿ ಸ್ಮಾರಕಗಳು

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2019, 14:31 IST
Last Updated 14 ಆಗಸ್ಟ್ 2019, 14:31 IST
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದ್ದು, ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದ ಹಂಪಿ ಪುರಂದರ ಮಂಟಪದ ಮೇಲ್ಭಾಗ ಬುಧವಾರ ಗೋಚರಿಸಿತು
ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಇಳಿಮುಖವಾಗಿದ್ದು, ನೀರಿನಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದ ಹಂಪಿ ಪುರಂದರ ಮಂಟಪದ ಮೇಲ್ಭಾಗ ಬುಧವಾರ ಗೋಚರಿಸಿತು   

ಹೊಸಪೇಟೆ: ತುಂಗಭದ್ರಾ ನದಿ ನೀರಿನ ಪ್ರವಾಹದಲ್ಲಿ ಸಂಪೂರ್ಣ ಮುಳುಗಡೆಯಾಗಿದ್ದ ತಾಲ್ಲೂಕಿನ ಹಂಪಿ ಸ್ಮಾರಕಗಳಿಂದ ನಿಧಾನವಾಗಿ ನೀರು ಹೊರಹೋಗುತ್ತಿದ್ದು, ನಾಲ್ಕು ದಿನಗಳ ಬಳಿಕ ಬುಧವಾರ ಸ್ಮಾರಕಗಳು ಸಾರ್ವಜನಿಕರಿಗೆ ಗೋಚರಿಸಿದವು.

ಹಂಪಿ ಪುರಂದರ ಮಂಟಪ,ವಿಜಯನಗರ ಕಾಲದ ಕಾಲು ಸೇತುವೆ,ಚಕ್ರತೀರ್ಥ, ರಾಮ–ಲಕ್ಷ್ಮಣ ದೇವಸ್ಥಾನದಿಂದ ನೀರು ಹೊರಹೋಗುತ್ತಿದೆ. ಪುರಂದರ ಮಂಟಪ, ಕಾಲು ಸೇತುವೆಯ ಮೇಲ್ಭಾಗವಷ್ಟೇ ಸದ್ಯ ಕಾಣಿಸುತ್ತಿದೆ. ರಾಮ–ಲಕ್ಷ್ಮಣ ದೇಗುಲ, ಚಕ್ರತೀರ್ಥದಿಂದ ಭಾರಿ ಪ್ರಮಾಣದಲ್ಲಿ ನೀರು ತಗ್ಗಿದ್ದು, ಸದ್ಯ ಅಲ್ಲಿ ಓಡಾಡಬಹುದಾಗಿದೆ.

ಜಲಾಶಯದಿಂದ ಬುಧವಾರ ನದಿಗೆ 1,11,244 ಕ್ಯುಸೆಕ್‌ ನೀರು ಹರಿಸಲಾಯಿತು. ಮಂಗಳವಾರ 1,15,954 ಕ್ಯುಸೆಕ್‌ ಹರಿಸಲಾಗಿತ್ತು. ದಿನೇ ದಿನೇ ನದಿಗೆ ಬಿಡುತ್ತಿರುವ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ. ಇನ್ನೊಂದೆಡೆ ಅಣೆಕಟ್ಟೆಯ ಒಳಹರಿವು ಮತ್ತೆ ಹೆಚ್ಚಾಗಿದೆ. ಮಂಗಳವಾರ 1,35,615 ಕ್ಯುಸೆಕ್‌ ಒಳಹರಿವು ಇತ್ತು. ಬುಧವಾರ ಅದು 1,54,109 ಕ್ಯುಸೆಕ್‌ಗೆ ಏರಿಕೆಯಾಗಿದೆ. ಒಟ್ಟು 1,633 ಅಡಿ ಟಿ.ಎಂ.ಸಿ. ನೀರು ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 1,632.36 ಟಿ.ಎಂ.ಸಿ. ಅಡಿ ನೀರು ಸಂಗ್ರಹವಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.