ADVERTISEMENT

ನಾಲ್ಕು ವರ್ಷಗಳ ನಂತರ ತುಂಬಿದ ಹರಿನಾಲಾ ಜಲಾಶಯ

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2019, 4:44 IST
Last Updated 4 ಆಗಸ್ಟ್ 2019, 4:44 IST
   

ಬೆಳಗಾವಿ: ಜಿಲ್ಲೆಯಲ್ಲಿ ಸತತ ನಾಲ್ಕುಗಳಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಬೈಲಹೊಂಗಲ ತಾಲ್ಲೂಕು ತಿಗಡಿ ಹರಿನಾಲಾ ಜಲಾಶಯ ನಾಲ್ಕು ವರ್ಷಗಳ ನಂತರ ಭರ್ತಿಯಾಗಿದ್ದು, ಜನರಿಗೆ ಸಂತಸ ತಂದಿದೆ.

ಹೆಚ್ಚುವರಿ ನೀರನ್ನು ಜಲಾಶಯದಿಂದ ಹೊರಬಿಡಲಾಗುತ್ತಿದೆ.ಈ ಜಲಾಶಯವು 2015ರ ನಂತರ ತುಂಬಿರಲಿಲ್ಲ. ಜಲಾಶಯ

ಭರ್ತಿಯಾಗಿರುವುದರಿಂದಬೈಲಹೊಂಗಲ ಭಾಗದ ರೈತರಲ್ಲಿ ಸಂತಸ‌‌‌‌ ಉಂಟಾಗಿದೆ.

ADVERTISEMENT

ಜಲಾಶಯಗಳ ನೀರಿನ ಮಟ್ಟ

ಮಲಪ್ರಭಾ ಜಲಾಶಯದ ಇಂದಿನ ಮಟ್ಟ 2068 ಅಡಿ ತಲುಪಿದೆ. ಒಳಹರಿವು 31,022 ಕ್ಯೂಸೆಕ್ ಇದ್ದರೆ, ಹೊರಹರಿವು 164 ಕ್ಯೂಸೆಕ್ ಇದೆ. ಜಲಾಶಯದ ಗರಿಷ್ಠ ಮಟ್ಟ 2079 ಅಡಿ.

ಘಟಪ್ರಭಾ ಜಲಾಶಯದ ಇಂದಿನ ಮಟ್ಟ 2162 ಅಡಿ, ಒಳಹರಿವು 36,323 ಕ್ಯೂಸೆಕ್, ಹೊರಹರಿವು 2413 ಕ್ಯೂಸೆಕ್ ಇದೆ.ಜಲಾಶಯದ ಗರಿಷ್ಠ ಮಟ್ಟ 2175 ಅಡಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.