ADVERTISEMENT

ಮುಖ್ಯಮಂತ್ರಿ ಮಧ್ಯಪ್ರವೇಶ- ನೋಟಿಸ್ ಹಿಂಪಡೆದ ಬ್ಯಾಂಕ್ 

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 9:13 IST
Last Updated 26 ಡಿಸೆಂಬರ್ 2018, 9:13 IST
   

ಬೆಂಗಳೂರು:ಸಾಲ ಮರುಪಾವತಿ ಮಾಡುವಂತೆ ಮುಂಡರಗಿ ತಾಲೂಕಿನ ಇಬ್ಬರಿಗೆ ನೀಡಿದ್ದ ನೋಟಿಸ್ಅನ್ನುಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಮಧ್ಯಪ್ರವೇಶದಿಂದಬ್ಯಾಂಕ್ ಹಿಂಪಡೆದಿದೆ.

ಮುಂಡರಗಿ ತಾಲ್ಲೂಕು ಹೆಸರೂರು ಗ್ರಾಮದ ಶರಣಪ್ಪ ವೀರಪ್ಪ ಚನ್ನಾಲಿ ಮತ್ತು ಚನ್ನಬಸವ್ವ ವೀರಪ್ಪ ಚನ್ನಾಲಿ ಅವರು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ ಪಡೆದಿದ್ದ ಸಾಲವು ರಾಜ್ಯ ಸರ್ಕಾರದ ಸಾಲ ಮನ್ನಾ ಯೋಜನೆ ವ್ಯಾಪ್ತಿಗೆ ಬಾರದ ಹಿನ್ನೆಲೆಯಲ್ಲಿ ಬ್ಯಾಂಕ್ ನೋಟಿಸ್ ನೀಡಿತ್ತು.

ಸದ್ಯಮುಖ್ಯಮಂತ್ರಿಗಳ ಮಧ್ಯಪ್ರವೇಶದಿಂದಾಗಿನೋಟಿಸ್ ಹಿಂಪಡೆದಿರುವಬ್ಯಾಂಕ್,ಋಣ ಸಮಾಧಾನ ಯೋಜನೆಯಡಿಯಲ್ಲಿ ಬಾಕಿ ಉಳಿದ ಮೊತ್ತಕ್ಕೆ ಶೇ. 50ರ ರಿಯಾಯಿತಿಯೊಂದಿಗೆ ಮರುಪಾವತಿ ಮಾಡಲು ಅವಕಾಶ ಕಲ್ಪಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.