ADVERTISEMENT

‘ಇಂಡಿಯಾ’ ಒಕ್ಕೂಟಕ್ಕೆ ಕರ್ನಾಟಕ ಅಡಮಾನ: ರೇವಣ್ಣ ಟೀಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2023, 22:43 IST
Last Updated 28 ಸೆಪ್ಟೆಂಬರ್ 2023, 22:43 IST
ಎಚ್‌.ಡಿ.ರೇವಣ್ಣ
ಎಚ್‌.ಡಿ.ರೇವಣ್ಣ   

ಕಲಬುರಗಿ: ‘ರಾಜ್ಯದ ಸರ್ಕಾರವು ‘ಇಂಡಿಯಾ’ ಒಕ್ಕೂಟವನ್ನು ಉಳಿಸಿಕೊಳ್ಳಲು ಕರ್ನಾಟಕವನ್ನೇ ಅಡಮಾನ ಇರಿಸಿದೆ’ ಎಂದು ಶಾಸಕ ಎಚ್‌.ಡಿ.ರೇವಣ ಹರಿಹಾಯ್ದರು.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ತಮಿಳುನಾಡಿನಲ್ಲಿನ 39 ಲೋಕಸಭಾ ಕ್ಷೇತ್ರಗಳನ್ನು ಗೆಲ್ಲಲು ಕರ್ನಾಟಕ ಹಾಗೂ ಕಾವೇರಿ ಕಣಿವೆಯ ರೈತರನ್ನು ‘ಇಂಡಿಯಾ’ ಒಕ್ಕೂಟಕ್ಕೆ ಒತ್ತೆಯಿಟ್ಟು ಕಾವೇರಿ ನೀರು ಹರಿಸಿದ್ದಾರೆ’ ಎಂದು ಟೀಕಿಸಿದರು.

‘ನಮಗೆ ‘ಎ’ ಟೀಮ್, ‘ಬಿ’ ಟೀಮ್ ಎನ್ನುತ್ತಿದ್ದರು. ಈಗ ಕರ್ನಾಟಕ ‘ಎ’ ಟೀಮ್, ತಮಿಳುನಾಡು ‘ಬಿ’ ಟೀಮ್ ಆಗಿದೆ. 135 ಸೀಟ್‌ಗಳನ್ನು ಗೆದ್ದ ಕಾಗ್ರೆಸ್‌ಗೆ ಆಪರೇಷನ್ ಹಸ್ತ ಮಾಡುವ ಪರಿಸ್ಥಿತಿ ಬಂದಿದೆ. ಆಪರೇಷನ್ ಹಸ್ತಕ್ಕೆ ಹೆದರುವುದಿಲ್ಲ. ಎಲ್ಲ ಪಕ್ಷಗಳ ಬಂಡವಾಳ ಗೊತ್ತಿದ್ದು, ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತೆ ಅಂಥ ಸ್ವಲ್ಪ ದಿನಗಳಲ್ಲಿ ನೋಡಿ’ ಎಂದರು.

ADVERTISEMENT

‘ಬಿಜೆಪಿ–ಜೆಡಿಎಸ್ ಮೈತ್ರಿಗೆ ನಮ್ಮಲ್ಲಿ ಅಸಮಾಧಾನ ಇಲ್ಲ. ಎಚ್‌.ಡಿ.ದೇವೇಗೌಡ ಮತ್ತು ಎಚ್‌.ಡಿ. ಕುಮಾರಸ್ವಾಮಿ ಹೇಳಿದ್ದೇ ಅಂತಿಮ. ಸಿಎಂ‌ ಇಬ್ರಾಹಿಂ ಸೇರಿದಂತೆ ಯಾರೂ ಜೆಡಿಎಸ್‌ ಬಿಟ್ಟು ಹೋಗುವುದಿಲ್ಲ. ಕರ್ನಾಟಕ ಬಂದ್‌ಗೆ ನಮ್ಮ ಬೆಂಬಲ ಇದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.