ಸಿದ್ದರಾಮಯ್ಯ
ಸಂಗೊಳ್ಳಿ (ಬೆಳಗಾವಿ ಜಿಲ್ಲೆ): ಅವನೊಬ್ಬ ಮೂರ್ಖ, ದೇಶಪ್ರೇಮ ಎಂದು ಏನೇನೋ ಮಾತನಾಡುತ್ತಾನೆ. ದೇಶದಲ್ಲಿ ಎಲ್ಲೆಲ್ಲಿ ಅತಿಕ್ರಮಿಸಿದ ಮಸೀದಿ ಇವೆಯೋ ಅವುಗಳನ್ನೆಲ್ಲ ಒಡೆದು ದೇವಸ್ಥಾನ ಕಟ್ಟುತ್ತೇವೆ ಎನ್ನುತ್ತಾನೆ. ಮೂರ್ಖ; ಮೊದಲು ದೇಶದ ಇತಿಹಾಸ ತಿಳಿದುಕೊ' ಎಂದೂ ಸಿದ್ದರಾಮಯ್ಯ ಯಾರ ಹೆಸರು ಹೇಳದೆಯೇ ಟೀಕಿಸಿದರು.
ಬೈಲಹೊಂಗಲ ತಾಲ್ಲೂಕಿನ ಸಂಗೊಳ್ಳಿಯಲ್ಲಿ ಸಂಗೊಳ್ಳಿ ರಾಯಣ್ಣ ಉತ್ಸವ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸೈನಿಕ ಶಾಲೆ, ಸಮುದಾಯ ಭವನ, ಭೋಜನಾಲಯ ಹಾಗೂ ಶಿಲ್ಪವನಗಳನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
'ಎಲ್ಲ ಜಾತಿಯವರನ್ನೂ, ಎಲ್ಲ ಧರ್ಮದವರನ್ನೂ ಸಮಾನವಾಗಿ ಕಾಣಬೇಕು. ನಾವೆಲ್ಲರೂ ಭಾರತೀಯರು. ಸಮಾನವಾಗಿ ಬಾಳಬೇಕು. ಆಗಮಾತ್ರ ಈ ದೇಶದ ಸಾರ್ವಭೌಮತ್ವ ಉಳಿಯುತ್ತದೆ' ಎಂದು ಕಿವಿಮಾತು ಹೇಳಿದರು.
'ನಾವೆಲ್ಲ ಸಂಗೊಳ್ಳಿ ರಾಯಣ್ಣ ಆಗಲು ಸಾಧ್ಯವಿಲ್ಲ. ಆದರೆ ಅವನ ಆದರ್ಶಗಳನ್ನು ರೂಢಿಸಿಕೊಳ್ಳಬಹುದು' ಎಂದೂ ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.