ADVERTISEMENT

2.5 ಕೋಟಿ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 18:24 IST
Last Updated 6 ಫೆಬ್ರುವರಿ 2019, 18:24 IST
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಯೋಜನಾ ನಿರ್ದೇಶಕ ಡಿ.ಎಸ್‌. ರಮೇಶ್ ಶಾಲಾ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ವಿತರಿಸಿದರು. ಉಪನಿರ್ದೇಶಕಿ ಡಾ.ವಿ. ವೀಣಾ, ಜಂಟಿ ನಿರ್ದೇಶಕರಾದ ಡಾ. ಸುರೇಶ ಶಾಸ್ತ್ರಿ ಮತ್ತು ಡಾ. ಪ್ರಭುದೇವ ಇದ್ದರು.
ರಾಷ್ಟ್ರೀಯ ಆರೋಗ್ಯ ಮಿಷನ್‌ನ ಯೋಜನಾ ನಿರ್ದೇಶಕ ಡಿ.ಎಸ್‌. ರಮೇಶ್ ಶಾಲಾ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ವಿತರಿಸಿದರು. ಉಪನಿರ್ದೇಶಕಿ ಡಾ.ವಿ. ವೀಣಾ, ಜಂಟಿ ನಿರ್ದೇಶಕರಾದ ಡಾ. ಸುರೇಶ ಶಾಸ್ತ್ರಿ ಮತ್ತು ಡಾ. ಪ್ರಭುದೇವ ಇದ್ದರು.   

ಬೆಂಗಳೂರು: ಇದೇ 8 ರಂದು ನಡೆಯುವ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನದಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಜ್ಯದ 2.5 ಕೋಟಿ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆಗಳನ್ನು ವಿತರಿಸಲಿದೆ.

ಒಂದು ವರ್ಷ ವಯಸ್ಸಿನಿಂದ ಮಕ್ಕಳಿಂದ 19 ವರ್ಷದವರೆಗಿನವರಿಗೆ 75 ಸಾವಿರ ಖಾಸಗಿ ಮತ್ತು 65 ಸಾವಿರ ಸರ್ಕಾರಿ ಶಾಲೆಗಳಲ್ಲಿ ಮಾತ್ರೆಗಳನ್ನು ವಿತರಿಸಲಾಗುವುದು. ಜಂತು ಹುಳುವಿನಿಂದಾಗಿ ಮಕ್ಕಳಳು ರಕ್ತ ಹೀನತೆ ಸೇರಿದಂತೆ ಹಲವು ರೀತಿಯ ಆರೋಗ್ಯ ಸಮಸ್ಯೆಗೆ ತುತ್ತಾಗುತ್ತಿದ್ದಾರೆ. ಇದರಿಂದ ಮಕ್ಕಳಲ್ಲಿ ಶಾರೀರಿಕ ಮತ್ತು ಮಾನಸಿಕ ಬೆಳವಣಿಗೆ ಕುಂಠಿತವಾಗುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT