ADVERTISEMENT

Holiday List 2022: ಮುಂದಿನ ವರ್ಷ 16 ದಿನ ಸಾರ್ವತ್ರಿಕ ರಜೆ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2021, 19:50 IST
Last Updated 25 ನವೆಂಬರ್ 2021, 19:50 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: 2022ನೇ ಇಸವಿಯಲ್ಲಿ ರಾಜ್ಯ ಸರ್ಕಾರಿ ನೌಕರರಿಗೆ 16 ದಿನ ಸಾರ್ವತ್ರಿಕ ರಜೆ ಹಾಗೂ 22 ದಿನ ನಿರ್ಬಂಧಿತ ರಜೆಗಳು ಸಿಗಲಿವೆ. ಮುಂದಿನ ವರ್ಷದ ಸರ್ಕಾರಿ ರಜಾದಿನಗಳ ಪಟ್ಟಿಗೆ ಸಚಿವ ಸಂಪುಟ ಸಭೆಗುರುವಾರ ಒಪ್ಪಿಗೆ ಸೂಚಿಸಿದೆ.

ಮೇ 01–ಕಾರ್ಮಿಕ ದಿನಾಚರಣೆ, ಜುಲೈ 10–ಬಕ್ರೀದ್, ಸೆ.25–ಮಹಾಲಯ ಅಮಾವಾಸ್ಯೆ, ಅ.02–ಗಾಂಧಿಜಯಂತಿ, ಅ.09–ವಾಲ್ಮೀಕಿ ಜಯಂತಿ ಮತ್ತು ಈದ್‌ ಮಿಲಾದ್, ಡಿ.25–ಕ್ರಿಸ್‌ಮಸ್‌‌ ಭಾನುವಾರ ಬರಲಿವೆ. ಹೀಗಾಗಿ, ಈ ದಿನಗಳು ಸಾರ್ವತ್ರಿಕ ರಜಾ ದಿನಗಳ ಪಟ್ಟಿಯಲ್ಲಿಲ್ಲ ಎಂದು ಸರ್ಕಾರದ ಆದೇಶ ಹೇಳಿದೆ.

ಹಾಗೆಯೇ, ಏ.10–ಶ್ರೀರಾಮನವಮಿಯು ಭಾನುವಾರ ಹಾಗೂ ಸೆ.10–ಬ್ರಹ್ಮಶ್ರೀ ನಾರಾಯಣಗುರು ಜಯಂತಿಯು ಎರಡನೇ ಶನಿವಾರ ಮತ್ತು ಡಿ.24–ಕ್ರಿಸ್‌ಮಸ್ ಈವ್‌ ನಾಲ್ಕನೇ ಶನಿವಾರ ಬರಲಿವೆ.
ಹೀಗಾಗಿ, ನಿರ್ಬಂಧಿತ ರಜೆಗಳಪಟ್ಟಿಯಲ್ಲಿಲ್ಲ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.