ಜಿ. ಪರಮೇಶ್ವರ
ಬೆಂಗಳೂರು: ‘ನಾನು ಎಲ್ಲ ಶಾಸಕರ ಕೈಗೆ ಸಿಗುತ್ತೇನೆ. ಬೇರೆ ಸಚಿವರು ಸಿಗದೇ ಹೋದರೆ, ಅದಕ್ಕೆ ನಾನು ಪ್ರತಿಕ್ರಿಯೆ ಕೊಡುವುದಿಲ್ಲ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಸರ್ಕಾರದಲ್ಲಿ ಯಾವುದೇ ಗೊಂದಲ ಇಲ್ಲ. ಶಾಸಕರು ಮತ್ತು ಮುಖ್ಯಮಂತ್ರಿ ನಡುವೆ ಕೂಡಾ ಗೊಂದಲ ಇಲ್ಲ’ ಎಂದರು.
‘ಕೆಲವು ಶಾಸಕರು ತಮ್ಮ ಕ್ಷೇತ್ರದ ಬಗ್ಗೆ ಮಾತನಾಡಿದ್ದಾರೆ ಅಷ್ಟೇ. ಮುಖ್ಯಮಂತ್ರಿಯವರು ಇದೆಲ್ಲವನ್ನೂ ಗಮನಿಸುತ್ತಾರೆ. ಇದಕ್ಕೆ ಇಡೀ ಸರ್ಕಾರವೇ ಗೊಂದಲದಲ್ಲಿದೆ ಎಂದು ಹೇಳುವುದು ಸರಿಯಲ್ಲ’ ಎಂದರು.
‘ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ರಾಜ್ಯಕ್ಕೆ ಯಾಕೆ ಬರುತ್ತಿದ್ದಾರೆ ಎನ್ನುವುದು ಗೊತ್ತಿಲ್ಲ. ಅವರು ಶಾಸಕರ ಜೊತೆ ಮಾತನಾಡಬಹುದು’ ಎಂದರು.
ಸುರ್ಜೇವಾಲಾ ಅವರನ್ನು ಉಸ್ತುವಾರಿ ಸ್ಥಾನದಿಂದ ಬದಲಿಸುವಂತೆ ಕೆಲವರು ಒತ್ತಾಯಿಸುತ್ತಿರುವ ಬಗ್ಗೆ ಪ್ರತಿಕ್ರಿಯಿಸಿದ ಪರಮೇಶ್ವರ, ‘ಇದು ಹೈಕಮಾಂಡ್‌ಗೆ ಸಂಬಂಧಿಸಿದ ವಿಷಯ. ಎಐಸಿಸಿಗೆ ಸಂಬಂಧಿಸಿದ ವಿಷಯ ನಾನು ಹೇಗೆ ಮಾತನಾಡಲಿ? ಎಐಸಿಸಿ ಅಧ್ಯಕ್ಷರು, ರಾಹುಲ್ ಗಾಂಧಿ ಈ ಬಗ್ಗೆ ತೀರ್ಮಾನಿಸುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.