
ಮೈಸೂರಿನಲ್ಲಿ ಶುಕ್ರವಾರ ಮೈಸೂರು ಜಿಲ್ಲಾ ಬಿಸಿಎಂ ವಿದ್ಯಾರ್ಥಿನಿಲಯಗಳ ಹಿರಿಯ ವಿದ್ಯಾರ್ಥಿಗಳ ಸಂಘವು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿರಿಯ ವಕೀಲ ರವಿವರ್ಮ ಕುಮಾರ್–ಶಾರದಾ ದಂಪತಿಗೆ ' ಡಿ. ದೇವರಾಜ ಅರಸು- ಎಲ್.ಜಿ. ಹಾವನೂರು ಪ್ರಶಸ್ತಿ' ಪ್ರದಾನ ಮಾಡಿದರು.
ಮೈಸೂರು: ‘ನನಗೀಗ 78 ವರ್ಷ ತುಂಬಿ, 79ನೇ ವರ್ಷ ನಡೆದಿದೆ. ನಾನಂತೂ ಕನಿಷ್ಠ ನೂರು ವರ್ಷ ಬಾಳುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಲ್ಲಿ ಹೇಳಿದರು.
ಕೆಎಸ್‌ಒಯು ಘಟಿಕೋತ್ಸವ ಭವನದಲ್ಲಿ ಶುಕ್ರವಾರ ವಕೀಲ ರವಿವರ್ಮಕುಮಾರ್ ಅವರಿಗೆ, ‘ಡಿ.ದೇವರಾಜ ಅರಸು–ಎಲ್.ಜಿ. ಹಾವನೂರು’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
‘ಜನರ ಆಶೀರ್ವಾದ ಇದ್ದಾಗಲಷ್ಟೇ ನಾವು ಅಧಿಕಾರದಲ್ಲಿರಲು ಸಾಧ್ಯ. ಒಟ್ಟು 16 ಚುನಾವಣೆ ಎದುರಿಸಿದ್ದು, ನಾಲ್ಕು ಬಾರಿ ಸೋತಿದ್ದೇನೆ’ ಎಂದರು.
‘ಹಿಂದೆ ನನ್ನ ಕಾರಿನ ಮೇಲೆ ಕಾಗೆ ಕುಳಿತಿದ್ದಕ್ಕೆ, ಕೆಲ ಜ್ಯೋತಿಷಿಗಳು ಸಿ.ಎಂ ಸ್ಥಾನವೇ ಹೋಗುತ್ತದೆ ಎಂದಿದ್ದರು. ಆಗ ಐದು ವರ್ಷ ಅಧಿಕಾರ ಪೂರೈಸಿದೆ. ಈಗ ಎರಡನೇ ಅವಧಿಯಲ್ಲಿ ಎರಡೂವರೆ ವರ್ಷ ಕಳೆದಿದೆ. ರವಿವರ್ಮಕುಮಾರ್–ಶಾರದಾ ಅಮಾವಾಸ್ಯೆ ದಿನವೇ ಮದುವೆ ಆದವರು. ನಮ್ಮಲ್ಲಿನ ಮೂಢನಂಬಿಕೆಗಳನ್ನು ಬಿಡಬೇಕು’ ಎಂದರು.
‘ನೀವೇ ಐದು ವರ್ಷ ಸಿ.ಎಂ ಆಗಿರಬೇಕು’ ಎಂದು ಅಭಿಮಾನಿಗಳು ಕೂಗಿದರು. ಇದಕ್ಕೆ ಪ್ರತಿಕ್ರಿಯಿಸಿ, ‘ಅದನ್ನು ಹೈಕಮಾಂಡ್ ತೀರ್ಮಾನಿಸುತ್ತದೆ’ ಎಂದು ಸಿದ್ದರಾಮಯ್ಯ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.