ADVERTISEMENT

50ಕ್ಕೂ ಅಧಿಕ ಐಎಎಸ್‌, ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2018, 18:23 IST
Last Updated 31 ಡಿಸೆಂಬರ್ 2018, 18:23 IST
   

ಬೆಂಗಳೂರು: ಹಿರಿಯ ಐಎಎಸ್‌ ಅಧಿಕಾರಿ, ಕೇಂದ್ರ ಸರ್ಕಾರದ ಆರ್ಥಿಕ ವ್ಯವಹಾರಗಳ ಜಂಟಿ ಕಾರ್ಯದರ್ಶಿ ಅರವಿಂದ ಶ್ರೀವಾಸ್ತವ, ಸಿಬ್ಬಂದಿ ಮತ್ತುಆಡಳಿತ ಸುಧಾರಣೆಇಲಾಖೆ ಕಾರ್ಯದರ್ಶಿ ಅಂಜುಂ ಪರ್ವೇಜ್‌ ಸೇರಿ 47 ಐಎಎಸ್‌ ಮತ್ತು 7 ಐಪಿಎಸ್ ಅಧಿಕಾರಿಗಳಿಗೆ ಬಡ್ತಿ ನೀಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಅಂಜುಂ ಪರ್ವೇಜ್‌ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾಗಿ ಬಡ್ತಿ ಪಡೆದಿದ್ದಾರೆ. ಬಡ್ತಿ ಪಡೆದ ಎಲ್ಲ ಅಧಿಕಾರಿಗಳ ವೇತನ ಶ್ರೇಣಿ ಬದಲಾಗಿದ್ದು, ಆಯಾ ಇಲಾಖೆಗಳಲ್ಲೇ ಮುಂದುವರಿದಿದ್ದಾರೆ.

ಬಡ್ತಿ ಪಡೆದ ಇತರ ಅಧಿಕಾರಿಗಳು: ಮನೋಜ್‌ ಕುಮಾರ್‌ ಮೀನಾ, ಎ.ಬಿ.ಇಬ್ರಾಹಿಂ, ಶಿವಯೋಗಿ ಸಿ.ಕಳಸದ್‌, ಕೆ.ಹೇಮಜಿ ನಾಯ್ಕ್‌, ಮನೋಜ್‌ ಜೈನ್‌, ಗುರ್ನೀತ್‌ ತೇಜ್‌, ಡಿ.ರಂದೀಪ್, ಸಲ್ಮಾ ಕೆ.ಫಾಹಿಮ್, ಬಿ.ಎಂ.ವಿಜಯ ಶಂಕರ್‌, ಡಾ. ಜಿ.ಸಿ.ಪ್ರಕಾಶ್‌, ಎನ್‌.ಪ್ರಸನ್ನ ಕುಮಾರ್‌, ಬಿ.ಪಿ.ಇಕ್ಕೇರಿ, ಎಸ್‌.ಎಸ್‌.ನಕುಲ್‌, ಪಿ.ಐ.ಶ್ರೀವಿದ್ಯಾ, ಎಂ.ಕನಗವಲ್ಲಿ, ಕೆ.ಬಿ. ಶಿವಕುಮಾರ್‌, ಡಾ. ವಿ.ರಾಮ ಪ್ರಶಾಂತ್‌ ಮನೋಹರ್‌, ವಸಿರೆಡ್ಡಿ ವಿಜಯ ಜ್ಯೋತ್ಸ್ನಾ, ಎನ್‌.ಮಂಜುಶ್ರೀ, ಆರ್‌.ವಿನೋತ್‌ ಪ್ರಿಯಾ, ಆರ್‌.ವೆಂಕಟೇಶ್‌ ಕುಮಾರ್‌, ಕೃಷ್ಣ ಬಾಜಪೈ, ಕೆ.ಎಸ್‌.ಮಂಜುನಾಥ್, ಎಸ್‌.ಬಿ.ಬೊಮ್ಮನಹಳ್ಳಿ, ಜೆ.ಎನ್‌.ಶಿವಮೂರ್ತಿ, ಟಿ.ವೆಂಕಟೇಶ್‌, ಬಿ.ರಾಮು, ಎಸ್‌.ಪಾಲಯ್ಯ, ಸಿ.ಪಿ.ಶೈಲಜಾ, ಎಂ.ಕೆ.ಶ್ರೀರಂಗಯ್ಯ, ಕ್ಯಾಪ್ಟನ್‌ ಡಾ. ಕೆ.ರಾಜೇಂದ್ರ, ಡಿ.ಎಸ್‌.ರಮೇಶ್‌, ಜೆ.ಮಂಜುನಾಥ್‌, ಆರ್‌.ಗಿರೀಶ್‌, ಡಾ. ಬಿ.ಆರ್‌.ಮಮತಾ.

ADVERTISEMENT

ಎಂ.ಜಿ.ಹಿರೇಮಠ, ಕೆ.ಜಿ.ಶಾಂತಾರಾಮ್, ಫೌಜಿಯಾ ತರನಮು, ಲಕ್ಷ್ಮಿಕಾಂತ ರೆಡ್ಡಿ, ಡಾ. ಪಿ.ರಾಜ, ಕೆ.ನಿತೀಶ್‌, ಕೆ.ಲಕ್ಷ್ಮಿ ಪ್ರಿಯಾ, ಮೊಹಮ್ಮದ್‌ ರೋಷನ್, ಡಾ. ಬಿ.ಸುಶೀಲಾ.

ಏಳು ಐಪಿಎಸ್‌ ಅಧಿಕಾರಿಗಳಿಗೆ ಬಡ್ತಿ: ಸೇವಾ ಹಿರಿತನದ ಆಧಾರದ ಮೇಲೆ ರಾಜ್ಯದ ಏಳು ಐಪಿಎಸ್ ಅಧಿಕಾರಿಗಳಿಗೆ ಮುಂಬಡ್ತಿ ನೀಡಿ ವರ್ಗಾವಣೆ ಮಾಡಲಾಗಿದೆ.ಡಿಐಜಿ ಹುದ್ದೆಯಲ್ಲಿದ್ದ ಎಚ್‌.ಎಸ್.ರೇವಣ್ಣ ಅವರನ್ನು ಐಜಿಪಿ ಸ್ಥಾನಕ್ಕೆ ಬಡ್ತಿ ನೀಡಿ, ಉತ್ತರ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.

ಎಸ್ಪಿಯಿಂದ ಡಿಐಜಿ: ಎಸ್ಪಿ ದರ್ಜೆಯಲ್ಲಿದ್ದ ಜಾರಿ ನಿರ್ದೇಶನಾಲಯದ ಜಂಟಿ ನಿರ್ದೇಶಕ (ಕೊಚ್ಚಿನ್) ಅಭಿಷೇಕ್ ಗೋಯಲ್, ಕರ್ನಾಟಕ ವಲಯದ ರಮಣ ಗುಪ್ತ ಹಾಗೂ ಕೇಂದ್ರ ಗುಪ್ತಚರ ದಳದ ಜಂಟಿ ನಿರ್ದೇಶಕ ಕೌಶಲೇಂದ್ರ ಕುಮಾರ್ ಅವರು ಡಿಐಜಿಗಳಾಗಿ ಬಡ್ತಿ ಪಡೆದು, ಮೂವರೂ ಕೇಂದ್ರ ಸೇವೆಯಲ್ಲೇ ಮುಂದುವರಿದಿದ್ದಾರೆ.

ದಕ್ಷಿಣ ಕನ್ನಡ ಎಸ್ಪಿಯಾಗಿದ್ದ ಡಾ. ಬಿ.ಆರ್.ರವಿಕಾಂತೇಗೌಡ ಅವರು ಡಿಐಜಿ ಆಗಿ ಅಗ್ನಿಶಾಮಕ ದಳಕ್ಕೆ ವರ್ಗವಾಗಿದ್ದರೆ, ಆರ್.ದಿಲೀಪ್ ಅವರಿಗೆ ರಾಜ್ಯ ‍ಪೊಲೀಸ್ ಮಹಾನಿರ್ದೇಶಕರ ಕಚೇರಿಯಲ್ಲಿ ಸ್ಥಾನ ನೀಡಲಾಗಿದೆ. ಆಂತರಿಕ ಭದ್ರತಾ ವಿಭಾಗದಲ್ಲಿ (ಐಎಸ್‌ಡಿ) ಎಸ್ಪಿ ಆಗಿದ್ದ ಎಸ್.ಎನ್.ಸಿದ್ಧರಾಮಪ್ಪ ಅವರಿಗೆ ಬಡ್ತಿ ನೀಡಿ ಐಎಸ್‌ಡಿಯಲ್ಲೇ ಮುಂದುವರಿಸಲಾಗಿದೆ.

ರವಿಕಾಂತೇಗೌಡ ಅವರಿಂದ ತೆರವಾದ ದಕ್ಷಿಣ ಕನ್ನಡದ ಎಸ್ಪಿ ಹುದ್ದೆಗೆ ಐಪಿಎಸ್ ಅಧಿಕಾರಿ ಬಿ.ಎಂ.ಲಕ್ಷ್ಮಿ ಪ್ರಸಾದ್ ಅವರನ್ನು ವರ್ಗಾಯಿಸಲಾಗಿದೆ. ಡಾ. ಚಂದ್ರಗುಪ್ತ ಹಾಗೂ ಕೆ.ತ್ಯಾಗರಾಜನ್ ಅವರು ಸೇವಾ ಹಿರಿತನ ಆಧಾರದ ಮೇರೆಗೆ ವೇತನ ಶ್ರೇಣಿಯಲ್ಲಿ ಮುಂದಿನ ಹಂತ ತಲುಪಿದ್ದಾರೆ.

ಡಿ.ವಿ.ಪ್ರಸಾದ್‌ ಕೇಂದ್ರ ಸೇವೆಗೆ

ಹಿರಿಯ ಐಎಎಸ್ ಅಧಿಕಾರಿ ಡಿ.ವಿ.ಪ್ರಸಾದ್‌ ಕೇಂದ್ರ ಸೇವೆಗೆ ತೆರಳಿದ್ದಾರೆ. ಕೇಂದ್ರ ಸರ್ಕಾರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಕ್ಯಾಬಿನೆಟ್ ಕಮಿಟಿಯಲ್ಲಿ ಸೇವೆ ಸಲ್ಲಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.