ADVERTISEMENT

ಐಸಿಎಆರ್‌ ಕಚೇರಿಯಲ್ಲಿ ತರಗೆಲೆಯೂ ಕಸವಲ್ಲ

ಗೊಬ್ಬರ ತಯಾರಿಸಿ ಮೇಲ್ಪಂಕ್ತಿ ಹಾಕಿಕೊಟ್ಟ ಐಸಿಎಆರ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 20:12 IST
Last Updated 26 ಜನವರಿ 2020, 20:12 IST
ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗಿರುವ ಇಂಗು ಬಾವಿಯ ಬಗ್ಗೆ ಡಾ.ರಾಜೇಂದ್ರ ಹೆಗಡೆ ಮಾಹಿತಿ ನೀಡಿದರು. ವಿಜ್ಞಾನಿ ಡಾ.ಆರ್.ಶ್ರೀನಿವಾಸ್ ಇದ್ದರು – ಪ್ರಜಾವಾಣಿ ಚಿತ್ರ
ಸಂಸ್ಥೆಯ ಆವರಣದಲ್ಲಿ ನಿರ್ಮಿಸಲಾಗಿರುವ ಇಂಗು ಬಾವಿಯ ಬಗ್ಗೆ ಡಾ.ರಾಜೇಂದ್ರ ಹೆಗಡೆ ಮಾಹಿತಿ ನೀಡಿದರು. ವಿಜ್ಞಾನಿ ಡಾ.ಆರ್.ಶ್ರೀನಿವಾಸ್ ಇದ್ದರು – ಪ್ರಜಾವಾಣಿ ಚಿತ್ರ   

ಬೆಂಗಳೂರು: ಕಚೇರಿ ಆವರಣ ಹಾಗೂ ಸುತ್ತಮುತ್ತಲಿನ ಪ್ರದೇಶಗಳ ಕಸಗಳನ್ನು ಗಿಡಗಳಿಗೆ ಗೊಬ್ಬರವಾಗಿ ಬಳಸುವ ಮೂಲಕ ನಗರದ ಭಾರತೀಯ ಕೃಷಿ ಸಂಶೋಧನಾ ಮಂಡಳಿಯ (ಐಸಿಎಆರ್) ರಾಷ್ಟ್ರೀಯ ಮಣ್ಣು ಮತ್ತು ಸರ್ವೇಕ್ಷಣೆ ಮತ್ತು ಭೂ ಬಳಕೆ ಯೋಜನೆ ಸಂಸ್ಥೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಹೆಬ್ಬಾಳದಲ್ಲಿರುವ ಸಂಸ್ಥೆಯ ಆವರಣದಲ್ಲಿ ಪಪ್ಪಾಯಿ, ಮಾವು,ಬಾಳೆ, ನೆಲ್ಲಿ, ಸಪೋಟ ಶ್ರೀಗಂಧ ಸೇರಿದಂತೆ ವಿವಿಧ ಮರಗಳನ್ನು ಬೆಳೆಸಲಾಗಿದೆ. ಈ ಮರಗಳ ಎಲೆ ಹಾಗೂ ಪ್ಲಾಸ್ಟಿಕ್‌ರಹಿತ ಕಸಗಳನ್ನು ಯಂತ್ರದ ಸಹಾಯದಿಂದ ಪುಡಿಮಾಡಿ, ಗೊಬ್ಬರವನ್ನಾಗಿ ಮಾರ್ಪಡಿಸಲಾಗುತ್ತಿದೆ. ಉದ್ಯಾನಕ್ಕೂ ಇದೇ ಗೊಬ್ಬರವನ್ನು ಬಳಸಲಾಗುತ್ತಿದೆ.ಅದೇ ರೀತಿ, 30 ಅಡಿ ಆಳದ ಇಂಗು ಬಾವಿಯನ್ನು ತೆರೆಯಲಾಗಿದ್ದು, ಮಳೆಗಾಲದಲ್ಲಿ ಕಟ್ಟಡದ ಎಲ್ಲ ನೀರು ಬಾವಿಯಲ್ಲಿ ಸಂಗ್ರಹವಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT