ಬೆಂಗಳೂರು: ‘ನನ್ನನ್ನು ಟೀಕೆ ಮಾಡುವುದರಿಂದ, ನಿಂದಿಸುವುದರಿಂದ, ಅಸೂಯೆ ಪಡುವುದರಿಂದ ಕುಮಾರಸ್ವಾಮಿ ಅವರಿಗೆ ಖುಷಿಯಾಗಿ, ಅವರ ಆರೋಗ್ಯ ಸುಧಾರಣೆ ಆಗುವುದಾದರೆ ಆ ಕೆಲಸವನ್ನು ಅವರು ಮುಂದುವರಿಸಲಿ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸುದ್ದಿಗಾರರ ಜೊತೆ ಶನಿವಾರ ಮಾತನಾಡಿದ ಅವರು, ‘ನಾನು ಕುಮಾರಸ್ವಾಮಿ ಅವರನ್ನು ಗಮನಿಸುತ್ತಿದ್ದೇನೆ. ಅವರು ತಮ್ಮ ಖುಷಿಗೆ ಮಾತನಾಡುತ್ತಿದ್ದಾರೆ’ ಎಂದರು.
‘ಕುಮಾರಸ್ವಾಮಿ ಏನಾದರೂ ಮಾತನಾಡಲಿ. ಇದರಿಂದ ಅವರಿಗೆ ಖುಷಿಯಾಗಿ ಆರೋಗ್ಯ ಸುಧಾರಣೆ ಆಗುವುದಾದರೆ ಆಗಲಿ. ಅವರ ಆರೋಗ್ಯ ಸುಧಾರಣೆಯಾಗುವುದು ನನಗೆ ಮುಖ್ಯ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.