ಬೆಂಗಳೂರು: ರೆಮ್‌ಡಿಸಿವಿರ್ ಚುಚ್ಚುಮದ್ದು ಮಾರಾಟ ಮಾಡುವುದಾಗಿ ಹೇಳಿ ನಗರದ ಔಷಧ ವಿತರಣಾ ಏಜೆನ್ಸಿ ಮಾಲೀಕರೊಬ್ಬರಿಂದ ₹ 5 ಲಕ್ಷ ಪಡೆದು ವಂಚಿಸಲಾಗಿದ್ದು, ಈ ಸಂಬಂಧ ದಕ್ಷಿಣ ವಿಭಾಗ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
‘ಶ್ರೀನಗರ ನಿವಾಸಿ ಆಗಿರುವ ಏಜೆನ್ಸಿ ಮಾಲೀಕ ವಂಚನೆ ಬಗ್ಗೆ ದೂರು ನೀಡಿದ್ದಾರೆ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಹಲವು ವರ್ಷಗಳಿಂದ ಏಜೆನ್ಸಿ ನಡೆಸುತ್ತಿರುವ ದೂರುವಾರ, ರೆಮ್‌ಡಿಸಿವಿರ್ ಚುಚ್ಚುಮದ್ದು ಸರಬರಾಜು ಮಾಡುವವರಿಗಾಗಿ ಹುಡುಕಾಟ ನಡೆಸುತ್ತಿದ್ದರು. ಸೂರತ್‌ನ ಆದಿನಾಥ್ ಏಜೆನ್ಸಿಯ ವೋರಾ ಎಂಬಾತನ ಮೊಬೈಲ್ ಸಂಖ್ಯೆ ಪಡೆದು ಮಾತನಾಡಿದ್ದರು. ಸರಬರಾಜು ಮಾಡಲು ಒಪ್ಪಿದ್ದ ಆರೋಪಿ, ₹5 ಲಕ್ಷ ಪಡೆದು ನಂತರ ಚುಚ್ಚುಮದ್ದು ಕಳುಹಿಸಿಲ್ಲ’ ಎಂದೂ ಪೊಲೀಸ್ ಮೂಲಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.