ADVERTISEMENT

ರೇಣುಕಾಚಾರ್ಯ ಸೇರಿದಂತೆ ಹಲವು ನಾಯಕರು ಸಂಪರ್ಕದಲ್ಲಿ; ಭೋಸರಾಜು

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2023, 9:45 IST
Last Updated 15 ಅಕ್ಟೋಬರ್ 2023, 9:45 IST
<div class="paragraphs"><p>ಎನ್. ಎಸ್.ಭೋಸರಾಜು</p></div>

ಎನ್. ಎಸ್.ಭೋಸರಾಜು

   

ಮಡಿಕೇರಿ: ರೇಣುಕಾಚಾರ್ಯ ಸೇರಿದಂತೆ ಹಲವು ಬಿಜೆಪಿ ನಾಯಕರು ಸಂಪರ್ಕದಲ್ಲಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್. ಎಸ್.ಭೋಸರಾಜು ತಿಳಿಸಿದರು.

ಈಗಾಗಲೇ ರೇಣುಕಾಚಾರ್ಯ ಅವರು ನನ್ನೊಂದಿಗೆ ಮಾತನಾಡಿದ್ದಾರೆ. ಎಷ್ಟು ಮಂದಿ ನಾಯಕರು ಮಾತನಾಡಿದ್ದಾರೆ ಎಂದು ಈಗಲೇ ಹೇಳುವುದಿಲ್ಲ ಎಂದು ಇಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದರು.

ADVERTISEMENT

ಬಿಜೆಪಿ ಖಾಲಿ ಕುಳಿತಿರುವುದರಿಂದ ಆದಾಯ ತೆರಿಗೆ ದಾಳಿ ಕುರಿತು ಇಲ್ಲಸಲ್ಲದ ಆರೋಪಗಳನ್ನು ಮಾಡಿ ಜನರ ದಾರಿ ತಪ್ಪಿಸುತ್ತಿದ್ದಾರೆ.‌ ರಾಜ್ಯದಲ್ಲಿ ಬರಗಾಲ ಆವರಿಸಿದೆ. ಅದರ ಬಗ್ಗೆ ಮಾತನಾಡದೇ ಸುಮ್ಮನೇ ಆರೋಪಿಸುತ್ತಿದ್ದಾರೆ. ಅವರು ನಮ್ಮ ಬಗ್ಗೆ ಏನು ಆರೋಪ ಮಾಡಿದ್ದಾರೆಯೋ ಅದನ್ನು ಅವರೆ ಇದುವರೆಗೂ ಮಾಡಿಕೊಂಡು ಬಂದಿದ್ದು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.