ADVERTISEMENT

ಭಾರತೀಯ ಓದುಗರ ಸಮೀಕ್ಷೆ | ಪ್ರಜಾವಾಣಿ ಓದುಗರ ಸಂಖ್ಯೆ ಹೆಚ್ಚಳ

​ಪ್ರಜಾವಾಣಿ ವಾರ್ತೆ
Published 8 ಮೇ 2020, 19:53 IST
Last Updated 8 ಮೇ 2020, 19:53 IST
   

ನವದೆಹಲಿ: ಭಾರತೀಯ ಓದುಗರ ಸಮೀಕ್ಷೆಯ (ಐಆರ್‌ಎಸ್‌) 2019–20ರ ನಾಲ್ಕನೇ ತ್ರೈಮಾಸಿಕದ ವರದಿ ಪ್ರಕಟವಾಗಿದ್ದು, ಪ್ರಜಾವಾಣಿ ಓದುಗರ ಸಂಖ್ಯೆಯಲ್ಲಿ ಏರಿಕೆಯಾಗಿದೆ.

ಈ ತ್ರೈಮಾಸಿಕದಲ್ಲಿ ಪತ್ರಿಕೆಯ ಒಟ್ಟು ಓದುಗರ ಸಂಖ್ಯೆಯಲ್ಲಿ 93,000 ಏರಿಕೆಯಾಗಿದೆ. ಹಾಗೆಯೇ, ಈ ಅವಧಿಯಲ್ಲಿ ಸರಾಸರಿ ಓದುಗರ ಸಂಖ್ಯೆಯಲ್ಲಿ ಏಳು ಸಾವಿರ ಹೆಚ್ಚಳವಾಗಿದೆ.

ದಿ ಪ್ರಿಂಟರ್ಸ್‌ (ಮೈಸೂರು) ಪ್ರೈವೇಟ್‌ ಲಿಮಿಟೆಡ್‌ನ ಬಳಗದ ಇಂಗ್ಲಿಷ್‌ ದಿನಪತ್ರಿಕೆ ಡೆಕ್ಕನ್‌ ಹೆರಾಲ್ಡ್‌ ಮತ್ತು ಪ್ರಜಾವಾಣಿಯ ಒಟ್ಟು ಓದುಗರ ಸರಾಸರಿ ಸಂಖ್ಯೆಯಲ್ಲಿ 29,000 ಏರಿಕೆ ಆಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.