ಸಿದ್ದರಾಮಯ್ಯ
ನವದೆಹಲಿ: ‘ವಿದ್ಯುನ್ಮಾನ ಮತಯಂತ್ರಗಳನ್ನು (ಇವಿಎಂ) ತಿರುಚಬಹುದು. ಹಾಗಾಗಿ, ದೇಶದಲ್ಲಿ ಇವಿಎಂಗಳನ್ನು ರದ್ದುಗೊಳಿಸಿ ಬ್ಯಾಲೆಟ್ ಪೇಪರ್‌ಗೆ ಮರಳುವುದೇ ಉತ್ತಮ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿದರು.
ಇಲ್ಲಿ ನಡೆದ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಪಾಲ್ಗೊಂಡಿದ್ದ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ‘ಇವಿಎಂ ಕಾರ್ಯನಿರ್ವಹಣೆ ಬಗ್ಗೆ ಅನುಮಾನವಿದೆ. ಸಾರ್ವಜನಿಕರ ಮನದಲ್ಲಿ ಮೂಡಿರುವ ಸಂದೇಹ ನಿವಾರಣೆಗೆ ಇವಿಎಂಗಳ ವ್ಯವಸ್ಥೆ ರದ್ದುಗೊಳಿಸಿ ಪೇಪರ್ ಬ್ಯಾಲೆಟ್ ಮರು ಪರಿಚಯಿಸುವ ತುರ್ತು ಅಗತ್ಯವಿದೆ’ ಎಂದರು.
ಅನೇಕ ಅಭಿವೃದ್ಧಿ ಹೊಂದಿದ ದೇಶಗಳು ಪೇಪರ್ ಬ್ಯಾಲೆಟ್ ಅನ್ನು ಬಳಸುತ್ತಿವೆ. ಭಾರತವೂ ಅದನ್ನೇ ಬಳಸಬೇಕು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.