ADVERTISEMENT

ಏಳು ಐಪಿಎಸ್‌ ಅಧಿಕಾರಿಗಳ ರಾತ್ರೋರಾತ್ರಿ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2018, 1:59 IST
Last Updated 17 ಅಕ್ಟೋಬರ್ 2018, 1:59 IST
   

ಬೆಂಗಳೂರು:ರಾಜ್ಯ ಸರ್ಕಾರ ಏಳು ಐಪಿಎಸ್‌ ಅಧಿಕಾರಿಗಳನ್ನು ಸೋಮವಾರ ಮಧ್ಯರಾತ್ರಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಸಾಮಾನ್ಯವಾಗಿ ವರ್ಗಾವಣೆ ಆದೇಶಕ್ಕೆ ರಾಜ್ಯ ಸಿಬ್ಬಂದಿ ಮತ್ತು ಆಡಳಿತ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಸಹಿ ಮಾಡಲಾಗುತ್ತದೆ. ಆದರೆ, ಈ ಆದೇಶಕ್ಕೆ ಡಿಪಿಆರ್‌ ಕಾರ್ಯದರ್ಶಿ ಸಹಿ ಮಾಡಿರುವುದು ವಿಶೇಷ. ಮೂರು ವರ್ಷಗಳ ಕಾಲ ಬೆಂಗಳೂರು ಸಂಚಾರ ವಿಭಾಗದ ಹೆಚ್ಚುವರಿ ಆಯುಕ್ತರಾಗಿದ್ದ ಆರ್‌.ಹಿತೇಂದ್ರ ಮತ್ತು ಬೆಂಗಳೂರು ದಕ್ಷಿಣ ವಿಭಾಗದ ಡಿಸಿಪಿ ಶರಣಪ್ಪ ಅವರನ್ನು ವರ್ಗಾವಣೆ ಮಾಡಿದ್ದರೂ ಸೂಕ್ತ ಹುದ್ದೆ ತೋರಿಸಿಲ್ಲ.

* ವರ್ಗಾವಣೆಗೊಂಡವರು

ADVERTISEMENT

ಹರಿಶೇಖರನ್‌– ಹೆಚ್ಚುವರಿ ಆಯುಕ್ತ, ಬೆಂಗಳೂರು ಸಂಚಾರ ವಿಭಾಗ

ಅಜಯ್‌ ಹಿಲೋರಿ– ಕಮಾಂಡೆಂಟ್‌, ಕೆಎಸ್‌ಆರ್‌ಪಿ

ಕೆ. ಅಣ್ಣಾಮಲೈ– ಡಿಸಿಪಿ ಬೆಂಗಳೂರು(ದಕ್ಷಿಣ)

ರಾಹುಲ್‌ ಕುಮಾರ್‌ ಶಹಾಪುರ್‌ವಾಡ್‌– ಡಿಸಿಪಿ(ಬೆಂಗಳೂರು ಪೂರ್ವ)

ಹರೀಶ್‌ ಪಾಂಡೆ– ಎಸ್ಪಿ, ಚಿಕ್ಕಮಗಳೂರು

ಆರ್‌.ಹಿತೇಂದ್ರ– ಹುದ್ದೆ ತೋರಿಸಿಲ್ಲ

ಶರಣಪ್ಪ ಎಸ್‌.ಡಿ– ಹುದ್ದೆ ತೋರಿಸಿಲ್ಲ

* ಐಎಎಸ್‌ ಅಧಿಕಾರಿಗಳ ವರ್ಗಾವಣೆ

ಇಬ್ಬರು ಐಎಎಸ್‌ ಅಧಿಕಾರಿಗಳನ್ನು ರಾಜ್ಯ ಸರ್ಕಾರ ಮಂಗಳವಾರ ವರ್ಗಾವಣೆ ಮಾಡಿದೆ.

ಡಾ.ಎಂ.ಲೋಕೇಶ್‌– ವಿಶೇಷ ಆಯುಕ್ತ (ಹಣಕಾಸು ಹಾಗೂ ಐಟಿ), ಬಿಬಿಎಂಪಿ, ಕೆ.ಶ್ರೀನಿವಾಸ್– ಆಯುಕ್ತ, ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.