ಬೆಂಗಳೂರು: ರಾಕೆಟ್ ಉಡಾವಣಾ ವಾಹನ ಮಾರ್ಕ್–3 (ಎಲ್ವಿಎಂ3) ಪೇಲೋಡ್ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಇಸ್ರೊ 2,000 ಕಿಲೊನ್ಯೂಟನ್ ಸಾಮರ್ಥ್ಯದ ಸೆಮಿ ಕ್ರಯೋಜೆನಿಕ್ ಎಂಜಿನ್ವೊಂದನ್ನು ಅಭಿವೃದ್ಧಿಪಡಿಸುತ್ತಿದೆ.
ಭವಿಷ್ಯದಲ್ಲಿ ಅಧಿಕ ತೂಕದ ಉಡಾವಣೆಗಳಿಗೆ ಈ ಎಂಜಿನ್ ಸಹಾಯಕವಾಗಲಿದೆ. ಮಹೇಂದ್ರಗಿರಿಯ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ ಸೆಂಟರ್ ಇದನ್ನು ಅಭಿವೃದ್ಧಿಪಡಿಸುತ್ತಿದೆ. ಈಗಾಗಲೇ ಸೆಮಿ ಕ್ರಯೋ ಪ್ರೀ– ಬರ್ನರ್ ದಹನ ಕಾರ್ಯವು ಯಶಸ್ವಿಯಾಗಿದೆ ನಡೆದಿದೆ ಎಂದು ಇಸ್ರೊ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.