ADVERTISEMENT

ಕಾರ್ಯಾಚರಣೆ ಮುಂದುವರಿಸಿದ ಐಟಿ: ಬಿಜೆಪಿ ಮುಖಂಡರ ಮನೆಗಳಲ್ಲಿ ಶೋಧ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2019, 6:50 IST
Last Updated 22 ಏಪ್ರಿಲ್ 2019, 6:50 IST
   

ಬೆಳಗಾವಿ: ಜಿಲ್ಲೆಯಲ್ಲಿ ಶೋಧ ಕಾರ್ಯಾಚರಣೆ ಮುಂದುವರಿಸಿರುವಐಟಿ ಅಧಿಕಾರಿಗಳು,ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಗುರುಪಾದ ಕಳ್ಳಿ ಅವರ ಮನೆಯಲ್ಲಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಗುರುಪಾದ‌ ಕಳ್ಳಿ ಅವರು ಬೆಳಗಾವಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುರೇಶ್ ಅಂಗಡಿ ಅವರ ಆಪ್ತ ಎನ್ನಲಾಗಿದ್ದು,ಸವದತ್ತಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿರುವ ಅವರ ಮನೆಯಲ್ಲಿ₹ 87ಸಾವಿರ ನಗದು, 200 ಗ್ರಾಂ. ಚಿನ್ನಾಭರಣ ದೊರೆತಿದೆ.

ಸುರೇಶ್ ಅಂಗಡಿ ಸಂಬಂಧಿ ಶಂಕರಗೌಡ ಪಾಟೀಲ ಅವರ ಮನೆಯಲ್ಲೂ ಶೋಧ ನಡೆಸಲಾಗಿದೆ. ಮಾಹಿತಿಯನ್ನು ಶಂಕರಗೌಡ ಪಾಟೀಲರು ಖಚಿತಪಡಿಸಿದ್ದಾರೆ.

ADVERTISEMENT

‘ಭಾನುವಾರ ರಾತ್ರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ನಾವು ಒಕ್ಕಲುತನ ಮಾಡಿಕೊಂಡು ಜೀವನ ನಡೆಸುತ್ತಿರುವವರು. ನಿನ್ನೆ ರಾತ್ರಿ ಐಟಿ ಅಧಿಕಾರಿಗಳು ಬಂದಾಗ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಪತ್ನಿ ಬಳಿ ಇದ್ದ ₹ 2 ಲಕ್ಷ ರೂಪಾಯಿ ಹಾಗೂ ಮೂವತ್ತು ತೊಲೆ ಒಡವೆ ನೋಡಿ ವಾಪಸ್ ನೀಡಿದ್ದಾರೆ. ನಂತರ ಎಲ್ಲದರ ದಾಖಲೆ ಒದಗಿಸುವಂತೆ ಹೇಳಿಹೋಗಿದ್ದಾರೆ’ ಎಂದು ಪಾಟೀಲ ಮಾಧ್ಯಮ ಪ್ರತಿನಿಧಿಗಳಿಗೆ ಪ್ರತಿಕ್ರಿಯೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.