ADVERTISEMENT

ತುಮಕೂರು: ಕಾಂಗ್ರೆಸ್ ಮುಖಂಡ, ಗುತ್ತಿಗೆದಾರ ರವಿಕುಮಾರ್ ಮನೆ ಮೇಲೆ ಐಟಿ ದಾಳಿ

​ಪ್ರಜಾವಾಣಿ ವಾರ್ತೆ
Published 4 ಫೆಬ್ರುವರಿ 2020, 5:37 IST
Last Updated 4 ಫೆಬ್ರುವರಿ 2020, 5:37 IST
ರಾಯಸಂದ್ರ ರವಿಕುಮಾರ್(ಎಡದಿಂದ ಮೊದಲನೆಯವರು), ಕಾಂಗ್ರೆಸ್ ಮುಖಂಡ ಮುದ್ದುಹನುಮೇಗೌಡ, ಶಾಸಕ ಜಿ.ಪರಮೇಶ್ವರ ಅವರೊಂದಿಗೆ.  -ಸಂಗ್ರಹ ಚಿತ್ರ
ರಾಯಸಂದ್ರ ರವಿಕುಮಾರ್(ಎಡದಿಂದ ಮೊದಲನೆಯವರು), ಕಾಂಗ್ರೆಸ್ ಮುಖಂಡ ಮುದ್ದುಹನುಮೇಗೌಡ, ಶಾಸಕ ಜಿ.ಪರಮೇಶ್ವರ ಅವರೊಂದಿಗೆ. -ಸಂಗ್ರಹ ಚಿತ್ರ   

ತುಮಕೂರು: ತುಮಕೂರಿನ ಮಾಜಿ ಸಂಸದ ಮುದ್ದಹನುಮೇಗೌಡರ ಆಪ್ತರಾಗಿರುವ ಕಾಂಗ್ರೆಸ್ ಮುಖಂಡ ಹಾಗೂ ಕ್ಲಾಸ್ ಒನ್ ಗುತ್ತಿಗೆದಾರ ರಾಯಸಂದ್ರ ರವಿಕುಮಾರ್ ಮನೆ ಮೇಲೆ ಐಟಿ ದಾಳಿ ಆಗಿದೆ.

ನಗರದ ಎಸ್.ಐ.ಟಿ. ಪ್ರದೇಶದಲ್ಲಿ ಇರುವ ರವಿ ಅವರ ಮನೆಯಲ್ಲಿ ಸೋಮವಾರ ಸಂಜೆಯಿಂದ ತಡರಾತ್ರಿಯವರೆಗೂ ಶೋಧಕಾರ್ಯ ನಡೆಸಿ ಕೆಲವು ದಾಖಲೆಗಳನ್ನು ವಶಕ್ಕೆ ಪಡೆದು ಐಟಿ ಅಧಿಕಾರಿಗಳು ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ತುರುವೇಕೆರೆಯ ರಾಯಸಂದ್ರದಲ್ಲಿನ ರವಿಕುಮಾರ್ ಅವರ ಮನೆ, ಅವರ ಸಹೋದರಿಯ ಮನೆ ಮೇಲೂ ಏಕಕಾಲದಲ್ಲಿ 15ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಬ್ಯಾಂಕ್ ಮತ್ತು ಹಣಕಾಸಿನ ವ್ಯವಹಾರದ ದಾಖಲೆಗಳನ್ನು ವಶಕ್ಕೆ ಪಡೆದಿದೆ.

ತುಮಕೂರಿನಲ್ಲಿನ ಆದಾಯ ತೆರಿಗೆ ಇಲಾಖೆ ಕಚೇರಿಗೆ ಮಂಗಳವಾರ ಬೆಳಿಗ್ಗೆ 11ಗಂಟೆಗೆ ವಿಚಾರಣೆಗೆ ಹಾಜರಾಗಲು ಅಧಿಕಾರಿಗಳು ನೋಟಿಸ್ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ರವಿಕುಮಾರ್ ಕಳೆದ ಬಾರಿ ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ, ಜೆಡಿಎಸ್ ಅಭ್ಯರ್ಥಿ(ಶಾಸಕ ಗೌರಿಶಂಕರ್) ಎದುರು ಪರಾಭವಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.