ADVERTISEMENT

ಶಿಲ್ಪಕಲಾ ಅಕಾಡೆಮಿ: ಐವರಿಗೆ ಗೌರವ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2022, 16:30 IST
Last Updated 26 ಆಗಸ್ಟ್ 2022, 16:30 IST
ಮಾನಯ್ಯ ನಾ. ಬಡಿಗೇರ
ಮಾನಯ್ಯ ನಾ. ಬಡಿಗೇರ   

ಬೆಂಗಳೂರು:ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ 2021ನೇ ಸಾಲಿನ ಗೌರವ ಪ್ರಶಸ್ತಿಗೆ ಐವರು ಕಲಾವಿದರು ಹಾಗೂ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ ನಾಲ್ಕು ಮಂದಿಯ ಶಿಲ್ಪ ಕಲಾಕೃತಿಗಳು ಆಯ್ಕೆಯಾಗಿವೆ.

ಅಕಾಡೆಮಿ ಅಧ್ಯಕ್ಷ ವೀರಣ್ಣ ಅರ್ಕಸಾಲಿ ನೇತೃತ್ವದ ಕಾರ್ಯಕಾರಿ ಸಮಿತಿ ಪ್ರಶಸ್ತಿಗೆ ಕಲಾವಿದರನ್ನು ಆಯ್ಕೆ ಮಾಡಿದೆ.ಬಾಗಲಕೋಟೆಯನಾಗಲಿಂಗಪ್ಪ ಗಂಗಪ್ಪ ಗಂಗೂರ (ಸಂಪ್ರದಾಯ ಶಿಲ್ಪ), ಉಡುಪಿಯರತ್ನಾಕರ ಎಸ್. ಗುಡಿಗಾರ್ (ಸಂಪ್ರದಾಯ ಶಿಲ್ಪ), ಬಳ್ಳಾರಿಯಪಿ. ಮುನಿರತ್ನಾಚಾರಿ (ಸಂಪ್ರದಾಯ ಶಿಲ್ಪ), ಕಲಬುರ್ಗಿಯಮಾನಯ್ಯ ನಾ. ಬಡಿಗೇರ (ಎರಕ ಶಿಲ್ಪ) ಹಾಗೂ ಬೆಂಗಳೂರಿನಬಿ.ಸಿ. ಶಿವಕುಮಾರ್ (ಸಮಕಾಲೀನ ಶಿಲ್ಪ) ಅವರು ‘ಗೌರವ ಪ್ರಶಸ್ತಿಗೆ’ ಆಯ್ಕೆಯಾಗಿದ್ದಾರೆ.

‘ಗೌರವ ಪ್ರಶಸ್ತಿ’ಯು ತಲಾ ₹ 50 ಸಾವಿರ, ‘ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ’ ತಲಾ ₹ 25 ಸಾವಿರ ನಗದು ಒಳಗೊಂಡಿದೆ.‘ಮೈಸೂರಿನ ರಾಮ್‌ಸನ್ಸ್‌ ಕಲಾ ಪ್ರತಿಷ್ಠಾನದ ಬಹುಮಾನ’ಕ್ಕೆ ಶಿವಮೊಗ್ಗದ ಅಜೇಯ್ ಗಜಾನನ ಅವರ ಮರದ ವಿಷ್ಣುವಿನ ಕಲಾಕೃತಿ ಭಾಜನವಾಗಿದೆ. ಇದು ಉತ್ತರ ಭಾರತದ ಶೈಲಿಯಲ್ಲಿದೆ.

ADVERTISEMENT

ಮನೋಹರ ಕಾಳಪ್ಪ ಪತ್ತಾರ ವಿಜಯಪುರ ಇವರ ಬಹುಮಾನಕ್ಕೆ ಬೆಂಗಳೂರಿನ ವಿನಯ್ ಕುಮಾರ್ ಎಸ್. ಅವರ ಫೈಬರ್ ಕಲಾಕೃತಿ,‘ಅಜ್ಜಿಹಳ್ಳಿ ಶಿಲ್ಪ ಶಾಸ್ತ್ರಿ ನಾಗೇಂದ್ರಾಚಾರ್ಯ ಸ್ಮಾರಕ ಬಹುಮಾನ’ಕ್ಕೆ ವಿಜಯನಗರದ ಬಿ. ಮೌನೇಶ್ ಆಚಾರ್ ಅವರ ಮಹಿಷಾಸುರ ಮರ್ಧಿನಿ ಕಲ್ಲಿನ ಕಲಾಕೃತಿ ಆಯ್ಕೆಯಾಗಿದೆ.

ಗೌರವ ಪ್ರಶಸ್ತಿ, ಹದಿನೇಳನೆ ವಾರ್ಷಿಕ ಶಿಲ್ಪಕಲಾ ಪ್ರದರ್ಶನ ಬಹುಮಾನ ವಿತರಣಾ ಸಮಾರಂಭ ಹಾಗೂ ಶಿಲ್ಪಕಲಾ ಪ್ರದರ್ಶನವನ್ನು ಸೆ.9ರ ಸಂಜೆ 5 ಗಂಟೆಗೆಬೆಳಗಾವಿಯಕುಮಾರ ಗಂಧರ್ವ ಕಲಾಮಂದಿರದಲ್ಲಿ ಹಮ್ಮಿಕೊಳ್ಳಲಾಗುವುದು. ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ. ಸುನೀಲ್ ಕುಮಾರ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಅಕಾಡೆಮಿ ರಿಜಿಸ್ಟ್ರಾರ್ ಆರ್. ಚಂದ್ರಶೇಖರ ತಿಳಿಸಿದ್ದಾರೆ.

ಶಿಲ್ಪಕಲಾ ಪ್ರದರ್ಶನ ಬಹುಮಾನಕ್ಕೆ ಆಯ್ಕೆಯಾದವರು

ಶಿಲ್ಪಿಗಳು; ಜಿಲ್ಲೆ; ಶೀರ್ಷಿಕೆ; ಮಾಧ್ಯಮ

ನರೇಶ್ ನಾಯ್ಕ;ಉಡುಪಿ; ‘pomander’; ಕಲ್ಲು

ಸುಮನ್ ಬಿ.; ಮೈಸೂರು;ಹೃದಯದ ಬಂಧ;ಕಲ್ಲು

ಬಾಬುರಾವ್ ಎಚ್.; ಕಲಬುರ್ಗಿ;ಬುದ್ಧ;ಮಿಶ್ರಮಾಧ್ಯಮ

ಎಸ್. ವೇಣುಗೋಪಾಲ್; ಮೈಸೂರು;ಶಂಕರ;ಕಲ್ಲು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.