ADVERTISEMENT

ಕಾಂಗ್ರೆಸ್‌ನೊಂದಿಗೆ ಮೈತ್ರಿ: ಹೈಕಮಾಂಡ್ ಜತೆ ಚರ್ಚೆ: ಎಚ್‌.ಡಿ.ದೇವೇಗೌಡ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2019, 19:46 IST
Last Updated 2 ಆಗಸ್ಟ್ 2019, 19:46 IST
   

ಬೆಂಗಳೂರು: ಹದಿನೇಳು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ಎದುರಾದರೆ ಕಾಂಗ್ರೆಸ್‌ ಜತೆಗೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಹೈಕಮಾಂಡ್‌ ಜತೆಗೆ ಮಾತನಾಡಿ ತೀರ್ಮಾನಿಸಲಾಗುವುದು ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಇಲ್ಲಿ ಶುಕ್ರವಾರ ಹೇಳಿದರು.

ಸವಿತಾ ಸಮಾಜದ ಮುಖಂಡರ ಸಭೆಯ ಬಳಿಕ ಸುದ್ದಿಗಾರರೊಂದಿಗೆಮಾತನಾಡಿ, ‘ಉಪಚುನಾವಣೆ ಕುರಿತು ಕಾಂಗ್ರೆಸ್ ನಾಯಕರು ಸಭೆ ನಡೆಸಿರುವುದನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಉಳಿದಂತೆ ಯಾವ ಮಾಹಿತಿಯೂ ಇಲ್ಲ’ ಎಂದರು.

ಪ್ರಜ್ವಲ್‌ ರಾಜ್ಯ ರಾಜಕಾರಣಕ್ಕೆ ಬರುತ್ತಾರೆ ಎಂಬ ವದಂತಿ ಅಲ್ಲಗಳೆದರು. ‘ಅವನು ಈಗ ಸಂಸದನಾಗಿದ್ದಾನೆ. ಹಾಸನ ಮಾತ್ರವಲ್ಲ ರಾಜ್ಯದ ಎಲ್ಲಾ ಜಿಲ್ಲೆಯ ಬಗ್ಗೆ ಚರ್ಚೆ ಮಾಡುತ್ತಾನೆ, ಹಾಗಂತ ರಾಜ್ಯ ರಾಜಕಾರಣಕ್ಕೆ ತಕ್ಷಣ ತರುವ ವಿಚಾರ ಇಲ್ಲ’ ಎಂದು ಸ್ಪಷ್ಟಪಡಿಸಿದರು.

ADVERTISEMENT

‘ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾಗ ಸವಿತಾ ಸಮಾಜಕ್ಕೂ ₹20 ಕೋಟಿ ನೀಡಿದ್ದರು. ಇದಕ್ಕೆ ಕೃತಜ್ಞತೆ ರೂಪದಲ್ಲಿ ಸಮಾಜದವರು ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ’ ಎಂದರು.

ನಿಖಿಲ್‌ಗೆ ಸಿನಿಮಾ ಬೇಡ:‘ನಿಖಿಲ್‌ ಕುಮಾರಸ್ವಾಮಿ ಇದೀಗ ಯುವ ಜನತಾದಳ ಹೊಣೆ ಹೊತ್ತಿದ್ದಾನೆ. ಅವನಿಗೆ ಸಿನಿಮಾ ಬೇಡ, ಪಕ್ಷಕ್ಕಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಕೈಯಲ್ಲಿರುವ ಸಿನಿಮಾದ ಡಬ್ಬಿಂಗ್ ಕೆಲಸ ಮುಗಿಸಬೇಕೆಂದು ಮನವಿ ಮಾಡಿದ್ದಾನೆ’ ಎಂದು ದೇವೇಗೌಡರು ಹೇಳಿದರು.

ನಿಖಿಲ್‌ಗೆ ಸಿನಿಮಾ ಬೇಡ

‘ನಿಖಿಲ್‌ ಕುಮಾರಸ್ವಾಮಿ ಇದೀಗ ಯುವ ಜನತಾದಳ ಹೊಣೆ ಹೊತ್ತಿದ್ದಾನೆ. ಅವನಿಗೆ ಸಿನಿಮಾ ಬೇಡ, ಪಕ್ಷಕ್ಕಾಗಿ ಕೆಲಸ ಮಾಡುವಂತೆ ಸೂಚಿಸಿದ್ದೇನೆ. ಕೈಯಲ್ಲಿರುವ ಸಿನಿಮಾದ ಡಬ್ಬಿಂಗ್ ಕೆಲಸ ಮುಗಿಸಬೇಕೆಂದು ಮನವಿ ಮಾಡಿದ್ದಾನೆ’ ಎಂದು ದೇವೇಗೌಡರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.