ADVERTISEMENT

ಸಿಎಂ ಸ್ಥಾನ ನೆಚ್ಚಿಕೊಳ್ತೀವಾ ನಾವು? ಇದು ಕುಮಾರಸ್ವಾಮಿ ಮಾತು

​ಪ್ರಜಾವಾಣಿ ವಾರ್ತೆ
Published 30 ಜನವರಿ 2019, 12:04 IST
Last Updated 30 ಜನವರಿ 2019, 12:04 IST
   

ಬೆಂಗಳೂರು:ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ಕುಟುಂಬ ನಮ್ಮದು, ಇನ್ನು ಈ ಮುಖ್ಯಮಂತ್ರಿ ಸ್ಥಾನವನ್ನು ನೆಚ್ಚಿಕೊಂಡು ಕುಳಿತುಕೊಳ್ಳುತ್ತೇವೆಯೇ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ಕುಟಿಕಿದರು.

ಇವತ್ತು ನನ್ನ ಮನಸ್ಸಿನಲ್ಲಿ ನೋವಿದೆ, ಅದನ್ನು ಮರೆತು ನಾಡಿನ ಜನರಿಗೆ ಅನುಕೂಲ ಮಾಡಬೇಕು ಎಂಬ ಉದ್ದೇಶದಿಂದಸಮ್ಮಿಶ್ರ ಸರ್ಕಾರದಲ್ಲಿ ಶ್ರಮಿಸುತ್ತಿದ್ದೇನೆಎಂದು ಕುಮಾರಸ್ವಾಮಿ ನೊಂದು ನುಡಿದರು. ಅವರುಜೆಡಿಎಸ್ ರಾಷ್ಟ್ರೀಯ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದರು.

ಸಮ್ಮಿಶ್ರ ಸರ್ಕಾರ ರಚನೆ ಬಳಿಕ ಒಳ್ಳೆಯ ಕೆಲಸಗಳು ಆಗುತ್ತವೆ ಎಂದು ನೀವು ಆಶಾಭಾವನೆ ಇಟ್ಟುಕೊಂಡಿದ್ರಿ ಆದರೆ ಅದು ಸಾಧ್ಯವಾಗುತ್ತಿಲ್ಲ ಎಂದು ಕುಮಾರಸ್ವಾಮಿ ವಿಷಾದಿಸಿದರು. ಈ ಸರ್ಕಾರದಲ್ಲಿ ಒಂದು ವರ್ಗವಣೆಯೂ ಆಗುತ್ತಿಲ್ಲ ಎಂದು ವಾಟ್ಸ್‌ಆ್ಯಪ್‌ನಲ್ಲಿ ಸಂದೇಶ ಹರಿಬಿಟ್ಟಿದ್ದಾರೆ,ನಾಡಿಗೆ ಒಳ್ಳೆಯ ಕೆಲಸ ಮಾಡಬೇಕೋ ಇಲ್ಲಾ, ನಿಮಗೆ ವರ್ಗಾವಣೆ ಕೆಲಸ ಆದ್ರೆ ಸಾಕೋ..ನಾನು ಹೇಳುವುದಕ್ಕಿಂತಲೂ ಇದನ್ನು ಜನರೇ ತೀರ್ಮಾನಿಸಲಿ ಎಂದು ಕುಮಾರಸ್ವಾಮಿ ಹೇಳಿದರು.

ADVERTISEMENT

ನನ್ನ ಪರಿಸ್ಥಿತಿ ನಿಮಗೆ ಅರ್ಥ ಆಗಿರುತ್ತೆ,ನಾನು ವರ್ಗಾವಣೆ ದಂಧೆ ನಡೆಸಬೇಕೆ?ವರ್ಗಾವಣೆ ಹೆಸರಲ್ಲಿ ನೀವು ಹಣ ಮಾಡುತ್ತಾ ಕುಳಿತರೆ ನನ್ನ ಸ್ಥಿತಿ ಏನಾಗಬಹುದು?ಪ್ರಧಾನಮಂತ್ರಿ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಂದ ಕುಟುಂಬ ನಮ್ಮದು,ಇನ್ನು ಈ ಮುಖ್ಯಮಂತ್ರಿ ಸ್ಥಾನವನ್ನು ನೆಚ್ಚಿಕೊಂಡು ಕುಳಿತುಕೊಳ್ಳುತ್ತೇವೆಯೇ ಎಂದು ಕುಮಾರಸ್ವಾಮಿ ಕಾಂಗ್ರೆಸ್‌ ವಿರುದ್ಧ ಪರೋಕ್ಷವಾಗಿ ಕುಟಿಕಿದರು.

ಕಾರ್ಯಕರ್ತರಿಗೆ ಮೋಸ ಮಾಡಿ ಇರಲು ಸಾಧ್ಯವೇ? ಸಾಲಮನ್ನಾಬಗ್ಗೆ ನಿಮಗೆ ಇನ್ನೂ ಅನುಮಾನವೇ ? ಎರಡೂವರೆ ಲಕ್ಷ ರೈತ ಕುಟುಂಬಗಳಿಗೆ ಸಾಲಮನ್ನಾದಆದೇಶ ಹೋಗಿದೆ. ಸಿದ್ದರಾಮಯ್ಯ ಅವಧಿಯಲ್ಲಿನ ಸಾಲಮನ್ನಾಹಣ ಬಾಕಿ ಇತ್ತು, ಅದನ್ನುಚುಕ್ತ ಮಾಡಿದ್ದೇನೆ. ಮಿತ್ರ ಪಕ್ಷದವರು ನನ್ನ ಮೇಲೆ ಒತ್ತಡ ತಂದು ಕೆಲವು ಆದೇಶಗಳನ್ನು ಮಾಡಿಸಿಕೊಂಡಿದ್ದಾರೆ. ನಾನೇನಾದ್ರೂ ಮೈತ್ರಿ ಸರ್ಕಾರದಲ್ಲಿ ಮುಂದುವರೆದಿದ್ದೇನೆ ಅಂದ್ರೆ ಅದು ನಿಮಗಾಗಿ ಮಾತ್ರ!ನನ್ನ ಮೇಲೆ ಒತ್ತಡ ತಂದು ನಿಗಮ, ಮಂಡಳಿ ನೇಮಕ ಮಾಡಿಸಿಕೊಂಡಿದ್ದಾರೆ. ಜೆಡಿಎಸ್‌ನಲ್ಲಿ ಸಹ ನೇಮಕ ಆಗಬೇಕಿದೆ ಸದ್ಯದಲ್ಲಿ ಅದನ್ನ ಮಾಡುತ್ತೇನೆ ಎಂದು ಕುಮಾರಸ್ವಾಮಿ ಕಾರ್ಯಕರ್ತರಿಗೆ ಭರವಸೆ ನೀಡಿದರು.

ಬೆಂಗಳೂರಲ್ಲಿ ಕೆಲಸವೇ ಆಗುತ್ತಿಲ್ಲ ಎಂದು ಒಬ್ಬರು ಹೇಳಿದ್ದಾರೆ,ಒಂದು ಲಕ್ಷ ಕೋಟಿ ರೂಪಾಯಿ ಕೆಲಸದ ಆದೇಶ ಆಗಿದೆ. 12 ವರ್ಷದಿಂದ ಆಗದ ಕೆಲಸ ಈಗ ಆರಂಭವಾಗುತ್ತಿದೆ ಆದರೂಈಗ ಏನೂ ಕೆಲಸ ಆಗ್ತಿಲ್ಲ ಅನ್ನುತ್ತಾರೆ ಎಂದು ವಿಷಾದವ್ಯಕ್ತಪಡಿಸಿದರು.

ಬೆಂಗಳೂರಿನ ಅಭಿವೃದ್ಧಿಗೆ ₹ 8 ಸಾವಿರ ಕೋಟಿ ಕ್ರಿಯಾಯೋಜನೆಗೆ ಅನುಮೋದನೆ ಕೊಟ್ಟಿದ್ದೇನೆ, ಕೆಲವರು ನನ್ನ ಬಗ್ಗೆ ಪದೇ ಪದೇ ಚರ್ಚೆ ಮಾಡುತ್ತಾರೆ.ಎಷ್ಟು ದಿನ ಇದನ್ನು ಸಹಿಸಿಕೊಳ್ಳಲು ಸಾಧ್ಯ ಹೇಳಿ?ಅಧಿಕಾರ ಏನು ಶಾಶ್ವತವೇ ? ಆ ಕಾರಣಕ್ಕಾಗಿಯೇ ಈ ರೀತಿ ಕೆಲಸ ಮಾಡುವುದಕ್ಕಿಂತ ಅಧಿಕಾರ ಬಿಡಲು ಸಿದ್ದ ಎಂದು ಹೇಳಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.