ಅಂಗಾಂಗ ಕಸಿ ಶಸ್ತ್ರಚಿಕಿತ್ಸೆ
ಬೆಂಗಳೂರು: ಜೀವಸಾರ್ಥಕತೆ ಯೋಜನೆಯಡಿ ಅಂಗಾಂಗ ಮತ್ತು ಅಂಗಾಂಶ ಕಸಿಗೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯು ಅಂಗಾಂಗ ನಿರ್ಧಾರ ಸಮಿತಿಯನ್ನು ಪುನರ್ ರಚಿಸಿ ಆದೇಶ ಹೊರಡಿಸಿದೆ.
ಏಳು ಸಮಿತಿಗಳನ್ನು ಮುಂದಿನ ಮೂರು ವರ್ಷಗಳ ಅವಧಿಗೆ ರಚಿಸಲಾಗಿದ್ದು, ಈ ಸಮಿತಿಗಳು ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳ ವೈದ್ಯಕೀಯ ತಜ್ಞರನ್ನು ಒಳಗೊಂಡಿದೆ. ಮೂತ್ರಪಿಂಡ ಸಲಹಾ ಸಮಿತಿಯು ಡಾ.ಶ್ರೀಧರ್ ಸಿ.ಜಿ., ಡಾ.ಉಮೇಶ್ ಎಲ್., ಡಾ.ಕಿಶೋರ್ ಬಾಬು ಎಸ್., ಡಾ.ಅನಿಲ್ ಕುಮಾರ್ ಬಿ.ಟಿ., ಡಾ.ಸಂತೋಷ್ ಪೈ, ಡಾ.ಮಂಜುನಾಥ್ ಎಸ್. ಶೆಟ್ಟಿ, ಯಕೃತ್ತಿನ ಸಲಹಾ ಸಮಿತಿಯು ಡಾ. ಶುಶ್ರುತ ಸಿ.ಎಸ್., ಡಾ. ಜಯಂತ ರೆಡ್ಡಿ, ಡಾ.ರವಿಕಿರಣ ಎಸ್.ಕೆ., ಡಾ.ರೋಮೆಲ್ ಎಸ್. ಅವರನ್ನು ಒಳಗೊಂಡಿದೆ.
ಶ್ವಾಸಕೋಶದ ಸಲಹಾ ಸಮಿತಿಯು ಡಾ.ಬಾಷಾ ಜೆ. ಖಾನ್, ಡಾ.ಪ್ರಕಾಶ್ ಎಂ. ಲುಧಾನಿ, ಡಾ.ಸೈಯದ್ ಜುಲ್ಬಾಮೈನ್ ತೌಶೀದ್, ಹೃದಯ ಸಲಹಾ ಸಮಿತಿಯು ಡಾ. ಅದಿತಿ ಸಿಂಘ್ವಿ, ಡಾ.ಪ್ರಸನ್ನ ಸಿಂಹ ಮೋಹನ್ ರಾವ್, ಡಾ.ಶಶಿರಾಜ್, ಡಾ. ಅಶೋಕ್ ಕುಮಾರ್, ಮಿದುಳು ನಿಷ್ಕ್ರಿಯ ಸಮಿತಿಯು ಡಾ.ಚಿನ್ನದೊರೈ, ಡಾ.ಚಂದ್ರಶೇಖರ ಟಿ.ಆರ್., ಡಾ.ನಾಗೇಶ್ ಆರ್., ಡಾ. ಕಾರ್ತಿಕ್ ಲಕ್ಷ್ಮಿಕಾಂತ್, ಡಾ. ರಾಮಕೃಷ್ಣ ಎಂ.ಎಸ್., ಡಾ. ಗಗನ್ ಬ್ರಾರ್, ರೋಗನಿರೋಧಕ ಮತ್ತು ರೋಗವಿಜ್ಞಾನ ಸಮಿತಿಯು ಡಾ.ಅದಿತಿ ಸಿಂಘ್ವಿ, ಡಾ.ಅಂಕಿತ್ ಮಾಥುರ್, ಡಾ. ಮೊಹಮ್ಮದ್ ಫಹಾದ್ ಖಾನ್ ಹಾಗೂ ಸಾಂಕ್ರಾಮಿಕ ರೋಗ ಸಮಿತಿಯು ಡಾ. ನೇಹಾ ಮಿಶ್ರಾ, ಡಾ. ಸ್ವಾತಿ ರಾಜಗೋಪಾಲ್ ಮತ್ತು ಡಾ. ಸವಿತಾ ಸೆಬಾಸ್ಟಿಯನ್ ಅವರನ್ನು ಒಳಗೊಂಡಿದೆ.
ಈ ಸಮಿತಿಯ ಸದಸ್ಯರು ಅಂಗಾಂಗ ಕಸಿಗೆ ಸಂಬಂಧಿಸಿದಂತೆ ಸಾಮಾನ್ಯ ಮತ್ತು ತುರ್ತು ವಿಭಾಗಗಳಲ್ಲಿ ಫಲಾನುಭವಿಗಳನ್ನು ನೋಂದಾಯಿಸಬೇಕು. ದಾನಿಯ ಅಂಗಾಂಗಗಳ ಸೂಕ್ತತೆ ಮತ್ತು ಯೋಗ್ಯತೆಯ ಬಗ್ಗೆ ಸಲಹೆ ಒದಗಿಸಬೇಕು. ಅಂಗಾಂಗ ಹಂಚಿಕೆಗೆ ಸಂಬಂಧಿಸಿದ ಸಮಸ್ಯೆಗಳನ್ನೂ ನಿವಾರಣೆ ಮಾಡಬೇಕು. ಮಿದುಳು ನಿಷ್ಕ್ರಿಯ ಘೋಷಣೆ ಪ್ರಕ್ರಿಯೆಯಲ್ಲಿ ಸಲಹೆ ಮತ್ತು ಸಹಕಾರ ಒದಗಿಸಬೇಕು. ರಾಜ್ಯ ಅಂಗ ಮತ್ತು ಅಂಗಾಂಶ ಕಸಿ ಸಂಸ್ಥೆ ಸದಸ್ಯ ಕಾರ್ಯದರ್ಶಿ ಅವರಿಗೆ ಸೂಕ್ತ ಶಿಫಾರಸುಗಳನ್ನು ನೀಡಬೇಕು ಎಂದು ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.