ADVERTISEMENT

ತಲಕಾಡಿನಲ್ಲಿ ಉತ್ಖನನ; ನಾಲ್ಕು ಅಡಿ ಉದ್ದದ ಜಿನಬಿಂಬ ಪತ್ತೆ

​ಪ್ರಜಾವಾಣಿ ವಾರ್ತೆ
Published 17 ಜನವರಿ 2019, 17:36 IST
Last Updated 17 ಜನವರಿ 2019, 17:36 IST
ತಲಕಾಡಿನಲ್ಲಿ ಉತ್ಖನನದ ವೇಳೆ ದೊರೆತ ಜಿನಬಿಂಬ
ತಲಕಾಡಿನಲ್ಲಿ ಉತ್ಖನನದ ವೇಳೆ ದೊರೆತ ಜಿನಬಿಂಬ   

ಮೈಸೂರು: ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯು ತಲಕಾಡಿನಲ್ಲಿ ನಡೆದ ಉತ್ಖನನದ ವೇಳೆ 12ರಿಂದ 13ನೇ ಶತಮಾನಕ್ಕೆ ಸೇರಿದ ಗಂಗರ ಕಾಲದ ಜಿನಬಿಂಬವೊಂದು ಪತ್ತೆಯಾಗಿದೆ.

ಕಾರ್ಯೋಚ್ಚರ್ಗ ಭಂಗಿಯಲ್ಲಿರುವ ಈ ವಿಗ್ರಹವು 4 ಅಡಿ ಉದ್ದವಿದ್ದು, ಬಳಪದ ಕಲ್ಲಿನಿಂದ ಕೆತ್ತಲಾಗಿದೆ. ವಿಗ್ರಹದ ಪ್ರಭಾವಳಿಯ ಸ್ವಲ್ಪ ಭಾಗ ಮುರಿದಿದೆ. ಅದೇ ಜಾಗದಲ್ಲಿ ಉತ್ಖನನ ಮುಂದುವರಿದಿದೆ.

ತಲಕಾಡಿನ ದಕ್ಷಿಣ ಭಾಗದ ಬಸದಿಯ ಪ್ರಾಕಾರದ ಒಂದು ಉಪಗುಡಿಯಲ್ಲಿ ಇದನ್ನು ಸ್ಥಾಪಿಸಿರುವ ಸಾಧ್ಯತೆಗಳಿವೆ ಎಂದು ಮೈಸೂರು ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ನಿವೃತ್ತ ಪ್ರಧಾನ ನಿರ್ದೇಶಕ ಪ್ರೊ.ಎಂ.ಎಸ್.ಕೃಷ್ಣಮೂರ್ತಿ ಅಭಿಪ್ರಾಯಪಟ್ಟಿದ್ದಾರೆ.

ADVERTISEMENT

ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಇಲಾಖೆ ನಿರ್ದೇಶಕ ಡಾ.ಆರ್.ಗೋಪಾಲ್, ಉಪನಿರ್ದೇಶಕಿ ಮಂಜುಳಾ ನೇತೃತ್ವದಲ್ಲಿ ಉತ್ಖನನ ಕಾರ್ಯವು ಡಿಸೆಂಬರ್‌ನಿಂದ ನಡೆಯುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.