ADVERTISEMENT

ಬಿಜೆಪಿ ಸರ್ಕಾರವಿದ್ದಾಗಲೇ ಜಿಂದಾಲ್‌ ಜಮೀನಿಗೆ ದರ ನಿಗದಿ: ಸಚಿವ ದೇಶಪಾಂಡೆ 

​ಪ್ರಜಾವಾಣಿ ವಾರ್ತೆ
Published 15 ಜೂನ್ 2019, 8:39 IST
Last Updated 15 ಜೂನ್ 2019, 8:39 IST
   

ಕಾರವಾರ:ರಾಜ್ಯದಲ್ಲಿ ಬಿಜೆಪಿ ಸರ್ಕಾರವಿದ್ದಾಗಲೇಜಿಂದಾಲ್ ಕಂಪನಿಗೆ ಜಮೀನು ನೀಡುವುದುನಿಗದಿಯಾಗಿತ್ತು ಎಂದುಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿರುಗೇಟು ನೀಡಿದ್ದಾರೆ.

ಜಿಂದಾಲ್‌ ಕಂಪನಿಯಿಂದ ನಮ್ಮ ಸರ್ಕಾರ ಹೆಚ್ಚಿನ ಹಣ ಕೇಳಿದ್ದರೂ ವಿರೋಧ ಪಕ್ಷದವರು ಅನವಶ್ಯಕ ಆರೋಪ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನಗರದಲ್ಲಿ ಶನಿವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ' ವಿರೋಧ ಪಕ್ಷ ಜವಾಬ್ದಾರಿಯುತವಾಗಿ ವರ್ತನೆ ಮಾಡಬೇಕು. ಬಿಜೆಪಿ ಸರ್ಕಾರ ಇದ್ದಾಗಲೇ ಆ ಜಮೀನಿಗೆ ದರ ನಿಗದಿ ಮಾಡಲಾಗಿತ್ತು. ನಾವು ಹೆಚ್ಚಿನ ಹಣಕ್ಕೆ ಭೂಮಿ ನೀಡಿದ್ದರೂ ವಿರೋಧ ಮಾಡುತ್ತಿದ್ದಾರೆ ಎಂದರು.

ADVERTISEMENT

ಕಂಪನಿಯವರು ಸಾವಿರಾರು ಕೋಟಿ ಹೂಡಿಕೆ ಮಾಡಿದ್ದಾರೆ. ಜಿಂದಾಲ್ ರಾಜ್ಯದಲ್ಲಿ ಅತೀ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ' ಎಂದು ಸಮರ್ಥಿಸಿಕೊಂಡರು.

'ಬಂಡವಾಳ ಹೂಡಿಕೆಗೆ ಸಂಸ್ಥೆಗಳನ್ನು ಆಕರ್ಷಿಸಲು ಎಲ್ಲ ರಾಜ್ಯಗಳು ಕಾಯುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ವಿರೋಧ ವ್ಯಕ್ತವಾದರೆ ರಾಜ್ಯದಲ್ಲಿ ಯಾರು ಬಂಡವಾಳ ಹೂಡಿಕೆ ಮಾಡಲು ಮುಂದೆ ಬರುತ್ತಾರೆ? ಹಿಂದೆ ಭೂಮಿ ತೆಗೆದುಕೊಂಡಾಗ ಬೆಲೆ ಕಮ್ಮಿ‌ ಇದ್ದು ಈಗ ಬೆಲೆ ಏರಿದರೆ ಏನು ಮಾಡಲು ಸಾಧ್ಯ? ವಿರೋಧ ಪಕ್ಷದ ಬಗ್ಗೆ ಗೌರವವಿದೆ,ವಾಚ್ ಡಾಗ್ ಆಗಿ ವಿರೋಧ ಪಕ್ಷ ಕೆಲಸ ಮಾಡಬೇಕು. ಜಮೀನು ನೀಡುವ ವಿಚಾರದಲ್ಲಿ ಸಚಿವ ಸಂಪುಟದ ಉಪ ಸಮಿತಿಯು ಇದೀಗ ಪುನರ್ ಪರಿಶೀಲನೆ ಮಾಡಲು ನಿರ್ಧರಿಸಿದೆ' ಎಂದರು.

'ಸಚಿವ ಸ್ಥಾನ ಸಿಗದಿದ್ದಕ್ಕೆ ಕಾಂಗ್ರೆಸ್ ಶಾಸಕರು ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ದೇಶಪಾಂಡೆ, 'ಕಾಂಗ್ರೆಸ್ ನ ಎಲ್ಲಾ ಶಾಸಕರು ಸಚಿವ ಸ್ಥಾನಕ್ಕೆ ಅರ್ಹರಿದ್ದಾರೆ. ನನ್ನನ್ನು ಸಚಿವನನ್ನಾಗಿ ಮಾಡಿ ಎಂದು ಎಲ್ಲೂ‌ ಕೇಳಿಲ್ಲ. ಕೊಟ್ಟ ಕೆಲಸ ನಿರ್ವಹಿಸುತ್ತಿದ್ದು ಸಚಿವ ಸ್ಥಾನದ ಅಟ್ಯಾಚ್ ಮೆಂಟ್ ನನಗಿಲ್ಲ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.