ADVERTISEMENT

‘ಜೋಗ’ಕ್ಕೆ ಜೀವಕಳೆ

ಶರಾವತಿ ಕಣಿವೆಯಲ್ಲಿ ನಿಧಾನಗತಿಯಲ್ಲಿ ನೆಲೆಯೂರಿದ ಮುಂಗಾರು

​ಪ್ರಜಾವಾಣಿ ವಾರ್ತೆ
Published 4 ಜುಲೈ 2019, 19:31 IST
Last Updated 4 ಜುಲೈ 2019, 19:31 IST
   

ಕಾರ್ಗಲ್: ಶರಾವತಿ ಕಣಿವೆಯಲ್ಲಿ ನಿಧಾನಗತಿಯಲ್ಲಿ ಮುಂಗಾರು ಮಾರುತ ನೆಲೆಯೂರಿದೆ. ವಿಶ್ವ ವಿಖ್ಯಾತ ಜೋಗ ಜಲಪಾತ ನಿಧಾನವಾಗಿ ಜೀವಕಳೆ ಮೈದುಂಬಿಕೊಳ್ಳುತ್ತಿರುವುದು ಗುರುವಾರ ಕಂಡುಬಂತು.

ಹೆಚ್ಚಿದ ಬಿಸಿಲು ಮತ್ತು ಮಳೆಯ ವಿಳಂಬದಿಂದಾಗಿ ಜಲಪಾತ ಪ್ರದೇಶ ಬರಡಾಗಿತ್ತು. ಶರಾವತಿ ಕಣಿವೆ ಪ್ರದೇಶದಲ್ಲಿ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಗುಡ್ಡ ಪ್ರದೇಶದ ಮಳೆ ನೀರು ಹರಿದು ಬಂದು ಶರಾವತಿ ನದಿಯನ್ನು ಸೇರಿಕೊಳ್ಳುತ್ತಿರುವುದರಿಂದ ಜಲಪಾತ ಜೀವಕಳೆ ಪಡೆಯುತ್ತಿದೆ.

‘ರಾಜ' ಗಾಂಭೀರ್ಯವನ್ನು ಮೈಗೂಡಿಸಿಕೊಂಡಿದ್ದರೆ, ‘ರೋರರ್’ ನಿಧಾನಕ್ಕೆ ಅರ್ಭಟ ಆರಂಭಿಸಿದೆ. ‘ರಾಕೆಟ್’ ಮಂದಗತಿಯಲ್ಲಿ ಚಿಮ್ಮುತ್ತಿದ್ದು, ‘ರಾಣಿ’ ವಯ್ಯಾರವನ್ನು ಮೈದುಂಬಿಕೊಳ್ಳುತ್ತಿದೆ.

ADVERTISEMENT

ಪ್ರವೇಶ ಶುಲ್ಕ ಏರಿಕೆ: ದೂರದ ಊರುಗಳಿಂದ ಸ್ವಲ್ಪ ಪ್ರಮಾಣದಲ್ಲಿ ಪ್ರವಾಸಿಗರು ಜೋಗಕ್ಕೆ ಬರುತ್ತಿದ್ದಾರೆ. ಜೋಗ ನಿರ್ವಹಣಾ ಪ್ರಾಧಿಕಾರ ಏಕಾಏಕಿ ಜಲಪಾತ ವೀಕ್ಷಣೆಯ ಪ್ರವೇಶ ಶುಲ್ಕವನ್ನು ₹ 5ರಿಂದ ₹10ಕ್ಕೆ ಏರಿಸಿದ್ದು, ಪ್ರವಾಸಿಗರ ಅಸಮಾಧಾನಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.