ADVERTISEMENT

‘ಮನೆಯಂಗಳದಲ್ಲಿ ಮಾತುಕತೆ’ ನಾಳೆ ಪುನರಾರಂಭ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2021, 20:01 IST
Last Updated 16 ಸೆಪ್ಟೆಂಬರ್ 2021, 20:01 IST
ಬಿ.ವಿ. ರಾಜಾರಾಮ್
ಬಿ.ವಿ. ರಾಜಾರಾಮ್   

ಬೆಂಗಳೂರು: ಕೊರೊನಾ ಸೋಂಕು ಕಾಣಿಸಿಕೊಂಡ ಬಳಿಕ ಸ್ಥಗಿತಗೊಂಡಿದ್ದ‘ಮನೆಯಂಗಳದಲ್ಲಿ ಮಾತುಕತೆ’ ತಿಂಗಳ ಕಾರ್ಯಕ್ರಮವನ್ನುಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪುನರಾರಂಭಿಸಿದೆ.

ಒಂದು ವರ್ಷದ ಏಳು ತಿಂಗಳ ಬಳಿಕ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದೇ ಶನಿವಾರ ಸಂಜೆ 4 ಗಂಟೆಗೆ ಕನ್ನಡ ಭವನದ ನಯನ ಸಭಾಂಗಣದಲ್ಲಿ 216ನೇ ಕಾರ್ಯಕ್ರಮವನ್ನು ಇಲಾಖೆ ಆಯೋಜಿಸಿದೆ. ತಿಂಗಳ ಅತಿಥಿಯಾಗಿ ರಂಗ ನಟ ಹಾಗೂ ನಿರ್ದೇಶಕ ಬಿ.ವಿ. ರಾಜಾರಾಮ್ ಭಾಗವಹಿಸಲಿದ್ದಾರೆ.

ಕಲೆ, ಸಾಹಿತ್ಯ, ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳ ನಾಡಿನ ಸಾಧಕರನ್ನು ಸಾರ್ವಜನಿಕರೊಂದಿಗೆ ಮುಖಾಮುಖಿಯಾಗಿಸುವುದು ಕಾರ್ಯಕ್ರಮದ ಉದ್ದೇಶ. ಇದನ್ನು 2001ರಲ್ಲಿ ಪ್ರಾರಂಭಿಸಲಾಗಿತ್ತು. 215ನೇ ಕಾರ್ಯಕ್ರಮದ ಅತಿಥಿಯಾಗಿ ಕರ್ನಾಟಕ ಜಾನಪದ ಅಕಾಡೆಮಿ ಅಧ್ಯಕ್ಷರಾದ ಬಿ. ಮಂಜಮ್ಮ ಜೋಗತಿ ಭಾಗವಹಿಸಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.