ADVERTISEMENT

ಬಿಜೆಪಿಗರಿಂದ ಎಲ್ಲಿದ್ಯಪ್ಪಾ ಗಂಡ್ಸು ಕೂಗು: ಅಶ್ವತ್ಥನಾರಾಯಣ ಕಾಲೆಳೆದ ಕಾಂಗ್ರೆಸ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 21 ಫೆಬ್ರುವರಿ 2023, 14:41 IST
Last Updated 21 ಫೆಬ್ರುವರಿ 2023, 14:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್‌. ಅಶ್ವತ್ಥನಾರಾಯಣ ವಿರುದ್ಧ ಕಾಂಗ್ರೆಸ್‌ ಕಿಡಿಕಾರಿದೆ.

ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ಅಶ್ವತ್ಥನಾರಾಯಣ ಹಾಗೂ ರೇಷ್ಮೆ ಅಭಿವೃದ್ಧಿ ಕೈಗಾರಿಕೆಗಳ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಗೌತಮ್ ಗೌಡ ವಿರುದ್ಧ ಬಿಜೆಪಿ ಕಾರ್ಯಕರ್ತರು ಹಾಗೂ ಮುಖಂಡರೇ ಪ್ರತಿಭಟನೆ ನಡೆಸಿದ್ದಾರೆ.

ಇದೇ ವಿಚಾರ ಪ್ರಸ್ತಾಪಿಸಿ ಟ್ವಿಟರ್‌ನಲ್ಲಿ ವಿಡಿಯೊ ಹಂಚಿಕೊಂಡಿರುವ ಕಾಂಗ್ರೆಸ್, ‘ಬಿಜೆಪಿಗರಿಂದಲೇ, ಬಿಜೆಪಿಗರ ವಿರುದ್ಧ ಗೋಬ್ಯಾಕ್ ಚಳವಳಿ ಜೋರಾಗುತ್ತಿದೆ. ಮಂಡ್ಯದಿಂದ ಆರ್‌.ಅಶೋಕ ಅವರನ್ನು ಕಾರ್ಯಕರ್ತರೇ ಓಡಿಸಿದರು.ಈಗ ರಾಮನಗರದಿಂದ ಅಶ್ವತ್ಥನಾರಾಯಣ ಅವರನ್ನು ಓಡಿಸಲು ಬಿಜೆಪಿ ಕಾರ್ಯಕರ್ತರೇ ಸಜ್ಜಾಗಿದ್ದಾರೆ. ಗಂಡಸ್ತನ ಸವಾಲು ಹಾಕುವ ಸಚಿವರು ಈಗ ತಮ್ಮದೇ ಕಾರ್ಯಕರ್ತರ ಮುಂದೆ ನಿಂತು ಗಂಡಸ್ತನ ತೋರಿಸುವರೇ? ಎಂದು ಪ್ರಶ್ನಿಸಿದೆ.

ADVERTISEMENT

‘ಎಲ್ಲಿದ್ಯಪ್ಪಾ ಗಂಡ್ಸು’ –ಇದು ನಮ್ಮ ಪ್ರಶ್ನೆಯಲ್ಲ, ಬಿಜೆಪಿ ಕಾರ್ಯಕರ್ತರೇ ಅಶ್ವತ್ಥನಾರಾಯಣ ಅವರಿಗೆ ಕೇಳುತ್ತಿರುವ ಪ್ರಶ್ನೆ. ಸಿದ್ದರಾಮಯ್ಯ ಅವರ ಕೊಲೆಗೆ ಕರೆ ಕೊಡುವವರಿಗೆ ತಾಕತ್ತಿದ್ದರೆ ತಮ್ಮ ಪಕ್ಷದ ಕಾರ್ಯಕರ್ತರೆದುರು ಗಂಡಸ್ತನದ ಪ್ರದರ್ಶಿಸಲಿ. ಕಾರ್ಯಕರ್ತರಿಂದಲೇ ಉಗಿಸಿಕೊಳ್ಳುವ ನಾಚಿಕೆಗೇಡಿನ ಸ್ಥಿತಿಗೆ ಬಂದಿದೆ ಬಿಜೆಪಿ’ ಎಂದು ಕಾಂಗ್ರೆಸ್‌ ಟೀಕಿಸಿದೆ.

ಇತ್ತೀಚೆಗೆ ಮಂಡ್ಯದಲ್ಲಿ ಮಾತನಾಡಿದ್ದ ಅಶ್ವತ್ಥನಾರಾಯಣ, ‘ಟಿಪ್ಪುವಿನಂತೆ ಸಿದ್ದರಾಮಯ್ಯ ಅವರನ್ನು ಹೊಡೆದುಹಾಕಬೇಕು’ ಎಂದು ಹೇಳಿಕೆ ನೀಡಿದ್ದರು. ಇದೀಗ ಅಶ್ವತ್ಥನಾರಾಯಣ ಹೇಳಿಕೆ ವಿವಾದಕ್ಕೀಡಾಗಿದ್ದು, ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್‌ ಮುಗಿಬಿದ್ದಿದೆ.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.