ADVERTISEMENT

ಕೃಷಿ ಡೀಸೆಲ್‌ ಸಹಾಯ ಧನ ₹ 500ಕ್ಕೆ ಹೆಚ್ಚಿಸುವ ಸಾಧ್ಯತೆ

​ಪ್ರಜಾವಾಣಿ ವಾರ್ತೆ
Published 14 ಜುಲೈ 2023, 16:12 IST
Last Updated 14 ಜುಲೈ 2023, 16:12 IST
   

ಬೆಂಗಳೂರು: ರೈತ ಶಕ್ತಿ ಯೋಜನೆಯಡಿ ಕೃಷಿ ಬಳಕೆಗಾಗಿ ನೀಡುವ ಡೀಸಲ್‌ ಸಹಾಯ ಧನವನ್ನು ಪ್ರತಿ ಎಕರೆಗೆ ₹ 250ರಿಂದ ₹ 500ಕ್ಕೆ ಹೆಚ್ಚಳ ಮಾಡುವ ಕುರಿತು ಪರಿಶೀಲಿಸಲಾಗುವುದು ಎಂದು ಕೃಷಿ ಸಚಿವ ಎನ್. ಚಲುವರಾಯ ಸ್ವಾಮಿ  ಹೇಳಿದರು.

ವಿಧಾನ ಪರಿಷತ್‌ನಲ್ಲಿ ಶುಕ್ರವಾರ ಕಾಂಗ್ರೆಸ್‌ನ ಎಂ.ನಾಗರಾಜು ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಕೃಷಿಯಲ್ಲಿ ಯಂತ್ರೋಪಕರಣಗಳ ಬಳಕೆ ಉತ್ತೇಜಿಸಲು ಹಾಗೂ ಇಂಧನ ವೆಚ್ಚದ ಭಾರ ತಗ್ಗಿಸಲು ಪ್ರತಿ ಎಕರೆಗೆ ₹ 250ರಂತೆ, ಗರಿಷ್ಠ ಐದು ಎಕರೆಗೆ ಸಬ್ಸಿಡಿ ಸಹಾಯಧನ ನೀಡಲಾಗುತ್ತಿದೆ. 2022–23ನೇ ಸಾಲಿನಲ್ಲಿ 55 ಲಕ್ಷ ರೈತರಿಗೆ ₹ 412 ಕೋಟಿ ನೀಡಲಾಗಿದೆ ಎಂದು ಮಾಹಿತಿ ನೀಡಿದರು.

ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡಿದ ಆರೋಪದ ಮೇಲೆ 61 ಪ್ರಕರಣ ದಾಖಲಿಸಲಾಗಿದೆ. ₹ 19.49 ಕೋಟಿ ಮೌಲ್ಯದ ದಾಸ್ತಾನು ವಶಕ್ಕೆ ಪಡೆಯಲಾಗಿದೆ. ಕಳಪೆ ಬಿತ್ತನೆ ಬೀಜ ಮಾರಾಟ ಮಾಡುವವರ ವಿರುದ್ಧ ಇನ್ನಷ್ಟು ಕ್ರಮ ಕೈಗೊಳ್ಳಲಾಗುವುದು ಎಂದು ಕಾಂಗ್ರೆಸ್‌ನ ಅಬ್ದುಲ್‌ ಜಬ್ಬಾರ್ ಪ್ರಶ್ನೆಗೆ ಉತ್ತರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.