ADVERTISEMENT

ರಾಮನಗರ, ಉಡುಪಿ ಸೇರಿ ರಾಜ್ಯದ 5 ಜಿಲ್ಲೆಗಳು ಕೋವಿಡ್ ಮುಕ್ತ

​ಪ್ರಜಾವಾಣಿ ವಾರ್ತೆ
Published 7 ಮೇ 2023, 21:09 IST
Last Updated 7 ಮೇ 2023, 21:09 IST
ಕೋವಿಡ್ ಪರೀಕ್ಷೆ –ಸಾಂಕೇತಿಕ ಚಿತ್ರ
ಕೋವಿಡ್ ಪರೀಕ್ಷೆ –ಸಾಂಕೇತಿಕ ಚಿತ್ರ   

ಬೆಂಗಳೂರು: ರಾಜ್ಯದಲ್ಲಿ ಕೆಲ ದಿನಗಳಿಂದ ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಗಣನೀಯ ಇಳಿಕೆ ಕಂಡಿದ್ದರಿಂದ ಐದು ಜಿಲ್ಲೆಗಳು ಕೋವಿಡ್ ಮುಕ್ತವಾಗಿದ್ದು, 18 ಜಿಲ್ಲೆಗಳಲ್ಲಿ ಸಕ್ರಿಯ ಪ್ರಕರಣ ಒಂದಂಕಿಯಲ್ಲಿದೆ. 

ಬಾಗಲಕೋಟೆ, ಬೆಳಗಾವಿ, ರಾಮನಗರ, ಉಡುಪಿ ಹಾಗೂ ಯಾದಗಿರಿ ಜಿಲ್ಲೆಯಲ್ಲಿ ಕೋವಿಡ್ ಸಕ್ರಿಯ ಪ್ರಕರಣವಿಲ್ಲ. ರಾಜ್ಯದಲ್ಲಿ 670 ಸಕ್ರಿಯ ಪ್ರಕರಣಗಳಿದ್ದು, 400 ಪ್ರಕರಣ ಬೆಂಗಳೂರಿನಲ್ಲಿಯೇ ಇದೆ. ಶಿವಮೊಗ್ಗ (75), ಬೆಂಗಳೂರು ಗ್ರಾಮಾಂತರ (47), ಮೈಸೂರು (30), ಉತ್ತರ ಕನ್ನಡ (15), ಬಳ್ಳಾರಿ (14), ತುಮಕೂರು (11) ಹಾಗೂ ಚಾಮರಾಜನಗರ (11) ಜಿಲ್ಲೆಯಲ್ಲಿ ಪ್ರಕರಣಗಳು ಎರಡಂಕಿಯಲ್ಲಿದೆ. ಉಳಿದ ಜಿಲ್ಲೆಗಳಲ್ಲಿ ಈ ಸಂಖ್ಯೆ ಒಂದಂಕಿಗೆ ಇಳಿದಿದೆ. 

ರಾಜ್ಯದಲ್ಲಿ ವಾರದ ಸೋಂಕು ದೃಢ ಪ್ರಮಾಣ ಶೇ 1.16ರಷ್ಟಿದೆ. ಸೋಂಕಿತರಲ್ಲಿ ಸದ್ಯ 30 ಮಂದಿ ಮಾತ್ರ ಆಸ್ಪತ್ರೆ ಚಿಕಿತ್ಸೆಗೆ ಒಳಗಾಗಿದ್ದಾರೆ. ಇವರಲ್ಲಿ 9 ಮಂದಿ ಐಸಿಯು ಹಾಸಿಗೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.