ADVERTISEMENT

Karnataka Polls: ಎಚ್‌ಡಿಕೆ, ಜಿಟಿಡಿ ಕುಟುಂಬಕ್ಕೆ 2, ಇಬ್ರಾಹಿಂ ಮಗನಿಗೆ ಟಿಕೆಟ್

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2022, 22:30 IST
Last Updated 19 ಡಿಸೆಂಬರ್ 2022, 22:30 IST
   

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಸಿದ್ಧತೆ ತೀವ್ರಗೊಳಿಸಿರುವ ಜೆಡಿಎಸ್‌, ಎಲ್ಲ ಪಕ್ಷಗಳಿಗಿಂತ ಮುಂಚಿತವಾಗಿಯೇ, 224 ಕ್ಷೇತ್ರಗಳ ಪೈಕಿ 93 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ ಅವರು ಸೋಮವಾರ, ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದರು.

ಉಳಿದ ಕ್ಷೇತ್ರಗಳಿಗೂ ಅಭ್ಯರ್ಥಿಗಳ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡುವುದಾಗಿ ಅವರು ‍ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ADVERTISEMENT

ಬಹುತೇಕ ಹಾಲಿ ಶಾಸಕರಿಗೆ ಟಿಕೆಟ್‌ ನೀಡಲಾಗಿದೆ. ಆದರೆ, ಮೊದಲ ಪಟ್ಟಿಯಲ್ಲಿ ಜೆಡಿಎಸ್‌ ಪ್ರಾಬಲ್ಯ ಹೊಂದಿರುವ ಹಾಸನದ ಯಾವ ಕ್ಷೇತ್ರಕ್ಕೂ ಟಿಕೆಟ್ ಘೋಷಿಸಿಲ್ಲ. ಶ್ರವಣಬೆಳಗೊಳ, ಬೇಲೂರು, ಅರಸೀಕೆರೆ, ಹೊಳೆನರಸೀಪುರ, ಸಕಲೇಶಪುರ, ಅರಕಲಗೂಡು ಕ್ಷೇತ್ರಗಳ ಅಭ್ಯರ್ಥಿ ಹೆಸರುಗಳನ್ನು ಘೋಷಿಸಿಲ್ಲ.

ಹಾಸನ ಜಿಲ್ಲೆಯಿಂದ ಸ್ಪರ್ಧಿಸುವ ಆಕಾಂಕ್ಷಿಯಾಗಿರುವ ಭವಾನಿ ರೇವಣ್ಣ ಅವರಿಗೆ ಮೊದಲ ಪಟ್ಟಿಯಲ್ಲಿ ಟಿಕೆಟ್‌ ಘೋಷಿಸಿಲ್ಲ. ಭವಾನಿ ಅವರನ್ನು ಚುನಾವಣಾ ಕಣಕ್ಕಿಳಿಸುವ ಬಗ್ಗೆ ಪಕ್ಷವು ಇನ್ನೂ ಸ್ಪಷ್ಟ ನಿರ್ಧಾರ ಪ್ರಕಟಿಸಿಲ್ಲ.

ಅರಸೀಕೆರೆ ಕ್ಷೇತ್ರದ ಶಾಸಕ ಕೆ.ಎಂ. ಶಿವಲಿಂಗೇಗೌಡ, ಅರಕಲಗೂಡು ಶಾಸಕ ಎ.ಟಿ. ರಾಮಸ್ವಾಮಿ ಅವರು ತಮ್ಮ ಮುಂದಿನ ನಡೆಯನ್ನು ಇನ್ನೂ ಸ್ಪಷ್ಟವಾಗಿ ಪ್ರಕಟಿಸಿಲ್ಲ. ಹೀಗಾಗಿ ಅವರ ಹೆಸರು ಸದ್ಯಕ್ಕೆ ಪಟ್ಟಿಯಲ್ಲಿಲ್ಲ ಎನ್ನಲಾಗಿದೆ.

ಕಾಂಗ್ರೆಸ್‌ ಜತೆ ಗುರುತಿಸಿಕೊಂಡಿರುವ ಶಾಸಕರಾದ ಕೆ. ಶ್ರೀನಿವಾಸಗೌಡ (ಕೋಲಾರ) ಮತ್ತು ಎಸ್‌.ಆರ್‌. ಶ್ರೀನಿವಾಸ್‌(ಗುಬ್ಬಿ) ಅವರನ್ನು ಕೈಬಿಡ ಲಾಗಿದೆ. ಚನ್ನಪಟ್ಟಣದಿಂದ ಎಚ್‌.ಡಿ. ಕುಮಾರಸ್ವಾಮಿ, ರಾಮನಗರದಿಂದ ನಿಖಿಲ್‌ ಕುಮಾರಸ್ವಾಮಿ, ಚಾಮುಂಡೇಶ್ವರಿಯಿಂದ ಜಿ.ಟಿ. ದೇವೇಗೌಡ, ಕೆ.ಆರ್‌. ನಗರದಿಂದ ಸಾ.ರಾ. ಮಹೇಶ್‌ ಸ್ಪರ್ಧಿಸಲಿದ್ದಾರೆ. ಹುಣಸೂರು ಕ್ಷೇತ್ರದಿಂದ ಜಿ.ಟಿ. ದೇವೇಗೌಡ ಅವರ ಪುತ್ರ ಹರೀಶ್‌ ಗೌಡ ಅವರಿಗೆ ಟಿಕೆಟ್‌ ನೀಡಲಾಗಿದೆ. ಸಿ.ಎಂ. ಇಬ್ರಾಹಿಂ ಅವರ ಪುತ್ರ ಸಿ.ಎಂ. ಫಯಾಜ್‌ ಅವರನ್ನು ಹುಮನಾ ಬಾದ್‌ದಿಂದ ಕಣಕ್ಕಿಳಿಸಲಾಗುತ್ತಿದೆ. ಮೊದಲ ಪಟ್ಟಿಯಲ್ಲಿ ಐವರು ಮುಸ್ಲಿಮರು, ನಾಲ್ವರು ಮಹಿಳೆಯರು ಮತ್ತು 22 ಪರಿಶಿಷ್ಟ ಜಾತಿಮತ್ತು ಪರಿಶಿಷ್ಟ ಪಂಗಡ ಅಭ್ಯರ್ಥಿಗಳಿದ್ದಾರೆ.

ಅಭ್ಯರ್ಥಿಗಳ ಪಟ್ಟಿ

ಖಾನಾಪುರ:ನಾಸೀರ್ ಭಾಗವಾನ್

ಬೈಲಹೊಂಗಲ;ಶಂಕರ ಮಾಡಲಗಿ

ಬಾದಾಮಿ;ಹನುಮಂತಪ್ಪ ಬಿ. ಮಾವಿನಮರದ

ಮುದ್ದೇಬಿಹಾಳ;ಡಾ.ಚನ್ನಬಸಪ್ಪ ಸಂಗಪ್ಪ ಸೊಲ್ಲಾಪುರ

ದೇವರಹಿಪ್ಪರಗಿ;ರಾಜುಗೌಡ ಪಾಟೀಲ

ಬಸವನಬಾಗೇವಾಡಿ;ಪರಮಾನಂದ ಬಸಪ್ಪ ತನಿಖೆದಾರ

ಬಬಲೇಶ್ವರ;ಬಸವರಾಜ ಹೊನವಾಡ

ನಾಗಠಾಣ(ಎಸ್‌ಸಿ);ದೇವಾನಂದ ಪಿ.ಚವ್ಹಾಣ

ಇಂಡಿ;ಬಿ.ಡಿ. ಪಾಟೀಲ್

ಸಿಂದಗಿ;ಶಿವಾನಂದ ಪಾಟೀಲ್

ಅಫಜಲಪುರ;ಶಿವಕುಮಾರ್ ನಾಟೇಕರ್

ಸೇಡಂ;ಬಾಲರಾಜ್ ಗುತ್ತೇದಾರ

ಚಿಂಚೋಳಿ (ಎಸ್.ಸಿ);ಸಂಜೀವ ಯಾಕಾಪುರ

ಆಳಂದ;ಮಹೇಶ್ವರಿ ವಾಲೆ

ಗುರುಮಠಕಲ್;ನಾಗನಗೌಡ ಕಂದಕೂರು

ಹುಮನಾಬಾದ್‌;ಸಿ.ಎಂ. ಫಯಾಜ್

ಬೀದರ್ ದಕ್ಷಿಣ;ಬಂಡೆಪ್ಪ ಕಾಶೆಂಪೂರ

ಬೀದರ್;ರಮೇಶ್ ಪಾಟೀಲ್

ಬಸವಕಲ್ಯಾಣ;ಎಸ್.ವೈ.ಖಾದ್ರಿ

ರಾಯಚೂರು ಗ್ರಾಮೀಣ (ಎಸ್.ಟಿ);ನರಸಿಂಹ ನಾಯಕ್

ಮಾನ್ವಿ (ಎಸ್‌ಟಿ);ರಾಜಾವೆಂಕಟಪ್ಪ ನಾಯಕ್

ದೇವದುರ್ಗ (ಎಸ್.ಟಿ);ಕರೆಮ್ಮಾ ಜಿ. ನಾಯಕ್

ಲಿಂಗಸುಗೂರು (ಎಸ್.ಸಿ);ಸಿದ್ದು ಬಂಡಿ

ಸಿಂಧನೂರು;ವೆಂಕಟರಾವ್ ನಾಡಗೌಡ

ಕುಷ್ಟಗಿ;ತುಕಾರಾಮ್ ಸುರ್ವಿ

ಕನಕಗಿರಿ(ಎಸ್.ಸಿ);ಅಶೋಕ ಉಮ್ಮಲಟ್ಟಿ

ಹಾವೇರಿ(ಎಸ್.ಸಿ);ತುಕಾರಾಮ್ ಮಾಳಗಿ

ಹಿರೇಕೆರೂರು;ಜಯಾನಂದ ಜಾವಣ್ಣನವರ

ರಾಣೆಬೆನ್ನೂರು;ಮಂಜುನಾಥ್ ಗೌಡರ್

ಹೂವಿನ ಹಡಗಲಿ(ಎಸ್.ಸಿ);ಪುತ್ರೇಶ್

ಸಂಡೂರು (ಎಸ್.ಟಿ);ಸೋಮಪ್ಪ

ಚಳ್ಳಕೆರೆ (ಎಸ್.ಟಿ);ರವೀಶ್

ಹೊಸದುರ್ಗ;ಎಂ. ತಿಪ್ಪೇಸ್ವಾಮಿ

ಹರಿಹರ;ಎಚ್.ಎಸ್. ಶಿವಶಂಕರ

ದಾವಣಗೆರೆ ದಕ್ಷಿಣ;ಅಮಾನುಲ್ಲಾ

ಚನ್ನಗಿರಿ;ಯೋಗೇಶ್

ಹೊನ್ನಾಳಿ;ಶಿವಮೂರ್ತಿಗೌಡ

ಶಿವಮೊಗ್ಗ ಗ್ರಾಮೀಣ (ಎಸ್.ಸಿ) ಶಾರದಾ ಪೂರ‍್ಯಾ ನಾಯಕ್

ಭದ್ರಾವತಿ;ಶಾರದಾ ಅಪ್ಪಾಜಿಗೌಡ

ತೀರ್ಥಹಳ್ಳಿ;ರಾಜಾರಾಮ್

ಶೃಂಗೇರಿ;ಸುಧಾಕರ್ ಶೆಟ್ಟಿ

ಮೂಡಿಗೆರೆ (ಎಸ್.ಸಿ): ಬಿ.ಬಿ. ನಿಂಗಯ್ಯ

ಚಿಕ್ಕಮಗಳೂರು;ತಿಮ್ಮಶೆಟ್ಟಿ

ಚಿಕ್ಕನಾಯಕನಹಳ್ಳಿ;ಸಿ.ಬಿ. ಸುರೇಶ್ ಬಾಬು

ತುರುವೇಕೆರೆ;ಎಂ.ಟಿ. ಕೃಷ್ಣಪ್ಪ

ಕುಣಿಗಲ್;ಡಿ. ನಾಗರಾಜಯ್ಯ

ತುಮಕೂರು ನಗರ;ಗೋವಿಂದರಾಜು

ತುಮಕೂರು ಗ್ರಾಮೀಣ;ಡಿ.ಸಿ. ಗೌರಿಶಂಕರ್

ಕೊರಟಗೆರೆ (ಎಸ್.ಸಿ);ಸುಧಾಕರ್ ಲಾಲ್

ಗುಬ್ಬಿ;ನಾಗರಾಜ

ಪಾವಗಡ (ಎಸ್.ಸಿ);ತಿಮ್ಮರಾಯಪ್ಪ

ಮಧುಗಿರಿ;ವೀರಭದ್ರಯ್ಯ

ಗೌರಿಬಿದನೂರು;ನರಸಿಂಹಮೂರ್ತಿ

ಬಾಗೇಪಲ್ಲಿ;ನಾಗರಾಜರೆಡ್ಡಿ

ಚಿಕ್ಕಬಳ್ಳಾಪುರ;ಕೆ.ಪಿ. ಬಚ್ಚೇಗೌಡ

ಶಿಡ್ಲಘಟ್ಟ;ರವಿಕುಮಾರ್

ಚಿಂತಾಮಣಿ; ಕೃಷ್ಣಾರೆಡ್ಡಿ

ಶ್ರೀನಿವಾಸಪುರ;ಜಿ.ಕೆ. ವೆಂಕಟಶಿವಾರೆಡ್ಡಿ

ಮುಳಬಾಗಿಲು (ಎಸ್.ಸಿ);ಸಮೃದ್ಧಿ ಮಂಜುನಾಥ್

ಕೆ.ಜಿ.ಎಫ್ (ಎಸ್.ಸಿ);ರಮೇಶ್ ಬಾಬು

ಬಂಗಾರಪೇಟೆ (ಎಸ್.ಸಿ);ಎಂ. ಮಲ್ಲೇಶ್ ಬಾಬು

ಕೋಲಾರ;ಸಿ.ಎಂ.ಆರ್. ಶ್ರೀನಾಥ್

ಮಾಲೂರು;ಜೆ.ಇ. ರಾಮೇಗೌಡ

ಬ್ಯಾಟರಾಯನಪುರ;ವೇಣುಗೋಪಾಲ್

ದಾಸರಹಳ್ಳಿ;ಆರ್. ಮಂಜುನಾಥ್

ಹೆಬ್ಬಾಳ;ಮೋಹಿದ್ ಅಲ್ತಾಫ್

ಗಾಂಧಿನಗರ;ವಿ. ನಾರಾಯಣಸ್ವಾಮಿ

ರಾಜಾಜಿನಗರ;ಎಲ್. ಗಂಗಾಧರ ಮೂರ್ತಿ

ಗೋವಿಂದರಾಜನಗರ;ಆರ್. ಪ್ರಕಾಶ್

ಬಸವನಗುಡಿ;ಅರಮನೆ ಶಂಕರ್

ಬೆಂಗಳೂರು ದಕ್ಷಿಣ;ಪ್ರಭಾಕರ್ ರೆಡ್ಡಿ

ಆನೇಕಲ್ (ಎಸ್.ಸಿ);ಕೆ.ಪಿ.ರಾಜು

ದೇವನಹಳ್ಳಿ(ಎಸ್.ಸಿ);ನಿಸರ್ಗ ನಾರಾಯಣಸ್ವಾಮಿ

ದೊಡ್ಡಬಳ್ಳಾಪುರ;ಮುನೇಗೌಡ

ನೆಲಮಂಗಲ (ಎಸ್.ಸಿ);ಡಾ.ಶ್ರೀನಿವಾಸ ಮೂರ್ತಿ

ಮಾಗಡಿ;ಎ. ಮಂಜುನಾಥ್

ರಾಮನಗರ;ನಿಖಿಲ್ ಕುಮಾರಸ್ವಾಮಿ

ಚನ್ನಪಟ್ಟಣ;ಎಚ್.ಡಿ. ಕುಮಾರಸ್ವಾಮಿ

ಮಳವಳ್ಳಿ (ಎಸ್.ಸಿ);ಡಾ.ಕೆ.ಅನ್ನದಾನಿ

ಮದ್ದೂರು;ಡಿ.ಸಿ. ತಮ್ಮಣ್ಣ

ಮೇಲುಕೋಟೆ;ಸಿ.ಎಸ್. ಪುಟ್ಟರಾಜು

ಮಂಡ್ಯ;ಎಂ. ಶ್ರೀನಿವಾಸ್

ಶ್ರೀರಂಗಪಟ್ಟಣ;ಡಾ.ರವೀಂದ್ರ ಶ್ರೀಕಂಠಯ್ಯ

ನಾಗಮಂಗಲ;ಸುರೇಶ್ ಗೌಡ

ಕೆ.ಆರ್. ಪೇಟೆ;ಎಚ್.ಟಿ. ಮಂಜುನಾಥ್

ಪಿರಿಯಾಪಟ್ಟಣ;ಕೆ. ಮಹಾದೇವ್

ಕೆ.ಆರ್. ನಗರ;ಸಾ.ರಾ. ಮಹೇಶ್

ಹುಣಸೂರು;ಹರೀಶ್ ಗೌಡ

ಚಾಮುಂಡೇಶ್ವರಿ;ಜಿ.ಟಿ.ದೇವೇಗೌಡ

ಟಿ.ನರಸೀಪುರ (ಎಸ್.ಸಿ);ಅಶ್ವಿನ್‌ಕುಮಾರ್

ವರುಣ;ಅಭಿಶೇಕ್

ಕೃಷ್ಣರಾಜ;ಮಲ್ಲೇಶ್

ಹನೂರು;ಮಂಜುನಾಥ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.