ADVERTISEMENT

ಹಜ್ ಸಮಿತಿಗೆ ಹೊಸ ಸದಸ್ಯರು

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 20:58 IST
Last Updated 20 ಜನವರಿ 2020, 20:58 IST

ಬೆಂಗಳೂರು: ಕರ್ನಾಟಕ ರಾಜ್ಯ ಹಜ್ ಸಮಿತಿಗೆ ನೂತನ ಸದಸ್ಯರನ್ನು ನೇಮಕಮಾಡಿ ಸರ್ಕಾರ ಸೋಮವಾರ ಆದೇಶಿಸಿದೆ.

ಸೈಯದ್ ನಾಸಿರ್ ಹುಸೇನ್ (ಸಂಸದ), ಕನೀಜ್ ಫಾತಿಮಾ (ಶಾಸಕಿ), ಬಿ.ಎಂ.ಫಾರೂಕ್ (ವಿಧಾನ ಪರಿಷತ್ ಸದಸ್ಯ), ಎಂ.ಡಿ.ನಯೀಮ್, ಡಾ.ಮೊಹಮದ್ ಕಬೀರ್ ಅಹಮದ್ (ಗ್ರಾಮ ಪಂಚಾಯಿತಿ ಸದಸ್ಯರು),ರುಕಿಯಾ ಬೇಗಂ, ಎ.ಬಿ.ಮೊಹಮ್ಮದ್ ಹನೀಫ್ ಅಸಿಯಾ, ಮೌಲಾನಾ ಹಫೀಜ್ ಮೊಹಮ್ಮದ್, ಸೈಯದ್ ಮಂಜುರ್ ರಾಜಾ, ಖುಸ್ರೋ ಖುರೇಶಿ, ರೌಫುದ್ದೀನ್ ಕಚೇರಿವಾಲೆ, ರೆಹಮತುಲ್ಲಾ, ಚಾಂದ್ ಪಾಷಾ, ಮೊಹಿದ್ದೀನ್ ಬಿನ್ ಸೈಯದ್ ಸುಬ್ಜಾನ್ ಅವರನ್ನು ನೇಮಕ ಮಾಡಲಾಗಿದೆ.

ಹಿಂದಿನ ಸಮಿತಿಯ ಅಧಿಕಾರ ಅವಧಿ ಜ. 18ಕ್ಕೆ ಕೊನೆಗೊಂಡಿದ್ದು, ಹೊಸ ಸದಸ್ಯರ ಅಧಿಕಾರ ಅವಧಿ ಮೂರು ವರ್ಷಗಳಾಗಿರುತ್ತದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.