ADVERTISEMENT

ನೆರೆ ರಾಜ್ಯಗಳಿಗೆ ಹೋಲಿಸಿದರೆ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್‌ ಬೆಲೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2018, 13:05 IST
Last Updated 5 ಜುಲೈ 2018, 13:05 IST
   

ಬೆಂಗಳೂರು: ಪೆಟ್ರೋಲ್‌ ಮತ್ತು ಡೀಸೆಲ್‌ ಮೇಲಿನ ತೆರಿಗೆ ದರವನ್ನು ಬಜೆಟ್‌ನಲ್ಲಿ ಪ್ರಸ್ತಾಪಿಸಿರುವಂತೆ ಹೆಚ್ಚಳ ಮಾಡಿದರೂ ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಕಡಿಮೆ ಇರಲಿದೆ.

ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಿಗಾಗಿ ಸಂಪನ್ಮೂಲ ಕ್ರೂಢಿಕರಣಕ್ಕೆ ಅನುವಾಗುವಂತೆ ಪೆಟ್ರೋಲ್‌ ಮೇಲಿನ ತೆರಿಗೆ ದರವನ್ನು ಪ್ರಸ್ತುತ ಶೇ 30 ರಿಂದ 32ಕ್ಕೆ ಹಾಗೂ ಡೀಸೆಲ್‌ ಮೇಲಿನ ತೆರಿಗೆ ದರವನ್ನು ಶೇ 19 ರಿಂದ 21ಕ್ಕೆ ಏರಿಕೆ ಮಾಡಲು ಪ್ರಸ್ತಾಪಿಸಲಾಗಿದೆ. ಇದರಿಂದ ಪೆಟ್ರೋಲ್‌ ಬೆಲೆ 1.14 ರೂಪಾಯಿ ಮತ್ತು ಡಿಸೇಲ್ ಬೆಲೆಯಲ್ಲಿ 1.12 ರೂಪಾಯಿ ಹೆಚ್ಚಳವಾಗಲಿದೆ.

ಆದಾಗ್ಯೂ ನೆರೆಯ ರಾಜ್ಯಗಳಿಗೆ ಹೋಲಿಕೆ ಮಾಡಿದರೆ, ಪ್ರಸ್ತಾಪಿತ ಬೆಲೆ ಏರಿಕೆಯ ನಂತರವೂ ರಾಜ್ಯದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರವು ನೆರೆಯ ರಾಜ್ಯಗಳಿಗಿಂತ ಕಡಿಮೆ ಇರಲಿದೆ.

ADVERTISEMENT

ಕೇರಳ, ಆಂಧ್ರಪ್ರದೇಶ, ತಮಿಳುನಾಡು, ಮಹಾರಾಷ್ಟ್ರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿಬಜೆಟ್‌ನಲ್ಲಿ ಪ್ರಸ್ತಾಪಿತ ತೆರಿಗೆಯ ಬಳಿಕವೂ ತೈಲದರಗಳು ಕಡಿಮೆಯಾಗಲಿವೆ.

ರಾಜ್ಯ ಪೆಟ್ರೋಲ್ ದರ ಡಿಸೇಲ್‌ ದರ

ಕರ್ನಾಟಕ ₹ 77.99 ₹ 69.55

ಕೇರಳ ₹ 78.21 ₹ 71.77

ಮಹಾರಾಷ್ಟ್ರ ₹ 83.23 ₹ 70.72

ತಮಿಳುನಾಡು ₹ 80.05 ₹ 72.68

ಆಂಧ್ರಪ್ರದೇಶ ₹ 81.74 ₹ 74.65

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.