ADVERTISEMENT

IPS ರವಿ ಚನ್ನಣ್ಣನವರ್‌ ವರ್ಗಾವಣೆ: ಪೊಲೀಸ್‌ ಅಧಿಕಾರಿ ಈಗ ವಾಲ್ಮೀಕಿ ನಿಗಮದ ಎಂಡಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 27 ಜನವರಿ 2022, 15:09 IST
Last Updated 27 ಜನವರಿ 2022, 15:09 IST
ರವಿ ಚನ್ನಣ್ಣನವರ್‌
ರವಿ ಚನ್ನಣ್ಣನವರ್‌   

ಬೆಂಗಳೂರು: ಸಿಐಡಿ ಎಸ್‌ಪಿ ರವಿ ಡಿ ಚನ್ನಣ್ಣನವರ್ ಸೇರಿದಂತೆ 9 ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ.

ರವಿ ಚನ್ನಣ್ಣನವರ್ ಅವರಿಗೆ ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಜಾತಿ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕರನ್ನಾಗಿ ನಿಯೋಜಿಸಲಾಗಿದೆ.

ಸಿಐಡಿ ಎಸ್‌ಪಿ ಭೀಮಾಶಂಕರ್ ಗುಳೇದ್ ಅವರನ್ನು ಬೆಂಗಳೂರು ಪೂರ್ವ ವಲಯದ ಡಿಸಿಪಿಯಾಗಿ ವರ್ಗಾಯಿಸಲಾಗಿದೆ.

ADVERTISEMENT

ಎಸಿಬಿ ಎಸ್‌ಪಿ ಅಬ್ದುಲ್ ಅಹಾದ್ ಅವರನ್ನು ಕೆಎಸ್‌ಆರ್‌ಟಿಸಿಯ ಭದ್ರತೆ ಮತ್ತು ವಿಚಕ್ಷಣಾ ದಳದ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಕೊಪ್ಪಳ ಎಸ್‌ಪಿ ಟಿ. ಶ್ರೀಧರ್ ಅವರನ್ನು ಡಿಸಿಆರ್‌ಇ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.ಎಸಿಬಿ ಎಸ್‌ಪಿ ಅರುನಾಂಗ್‌ಶು ಗಿರಿ ಅವರನ್ನು ಕೊಪ್ಪಳ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ಕಾರಾಗೃಹ ಇಲಾಖೆಯ ಎಸ್‌ಪಿ ಟಿ.ಪಿ. ಶಿವಕುಮಾರ್ ಅವರನ್ನು ಚಾಮರಾಜನಗರ ಎಸ್‌ಪಿಯಾಗಿ ವರ್ಗಾವಣೆ ಮಾಡಲಾಗಿದೆ.ಚಾಮರಾಜನಗರ ಎಸ್‌ಪಿಯಾಗಿದ್ದ ದಿವ್ಯಾ ಸಾರಾ ಥಾಮಸ್ ಅವರನ್ನು ಮೈಸೂರು ಪೊಲೀಸ್ ಅಕಾಡೆಮಿಯ ಉಪ ನಿರ್ದೇಶಕರನ್ನಾಗಿ ವರ್ಗಾಯಿಸಲಾಗಿದೆ.

ಸ್ಥಳ ನಿರೀಕ್ಷೆಯಲ್ಲಿದ್ದ ಐಪಿಎಸ್ ಅಧಿಕಾರಿ ಡೆಕ್ಕಾ ಸುರೇಶ್ ಬಾಬು ಅವರನ್ನು ಬೀದರ್ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ. ಬೀದರ್ ಎಸ್‌ಪಿ ನಾಗೇಶ್ ಡಿಎಲ್‌ ಅವರನ್ನು ಬೆಂಗಳೂರು ಸಿಐಡಿ ಎಸ್‌ಪಿಯಾಗಿ ವರ್ಗಾಯಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.